ಚೆಮ್ಮನೂರ್ ಇಂಟರ್ ನ್ಯಾಷನಲ್ ಜ್ಯುವೆಲರ್ಸ್, ಮೊದಲ ಕೇರಳ ಬ್ರ್ಯಾಂಡ್ ಜ್ಯುವೆಲರಿಯು ಅಮೆರಿಕಾದ ಹೋಸ್ಟನ್ ನಲ್ಲಿ ತನ್ನ ಮಳಿಗೆಯನ್ನು ತೆರೆಯಿತು. ಬಾಬಿ & ಮರಡೋನಾ ಫೈನಾನ್ಸ್ & ಇನ್ವೆಸ್ಟ್ ಮೆಂಟ್ ನ 120ನೇ ಶಾಖೆಯನ್ನು ಸಹ ಉದ್ಘಾಟಿಸಲಾಯಿತು. ಆಭರಣ ಮಳಿಗೆಯಲ್ಲಿ ತರಾವರಿ ಚಿನ್ನ, ವಜ್ರ ಮತ್ತು ಬ್ರ್ಯಾಂಡೆಡ್ ವಾಚ್ ಗಳನ್ನು ಪ್ರದರ್ಶಿಸಲಾಗಿದೆ. ಅತಿ ಶೀಘ್ರದಲ್ಲೆ ಇನ್ನೂ ಹೆಚ್ಚು ಹೊಸ ಬ್ರ್ಯಾಂಚ್ ಗಳನ್ನು ಅಮೆರಿಕಾದಲ್ಲಿ ತೆರೆಯಲಾಗುವುದು ಎಂದು ಚೆಮ್ಮನೂರ್ ಜ್ಯುವೆಲರ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಬಾಬಿ ಚೆಮ್ಮನೂರ್ ಹೇಳಿದರು. ಬಾಬಿ ಚೆಮ್ಮನೂರ್ ಅವರು 812 ಕಿಲೋಮೀಟರ್ ಓಟದ ವಿಶಿಷ್ಟ ವಿಶ್ವ ದಾಖಲೆ ಹೊಂದಿದ್ದಾರೆ.