ವಿದೇಶಿ ವಿನಿಮಯ ಮೀಸಲು 360 .90 ಡಾಲರ್ ಗಳಿಗೆ ಕುಸಿತ!
ಭಾರತದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿತ ಕಂಡಿದೆ ಎಂದು ಆರ್ ಬಿಐ ತಿಳಿಸಿದೆ.
ಚೆನ್ನೈ: ಭಾರತದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿತ ಕಂಡಿದೆ ಎಂದು ಆರ್ ಬಿಐ ತಿಳಿಸಿದೆ.
ಮೇ.20 ರ ವರೆಗಿನ ವಿದೇಶಿ ವಿನಿಮಯ ಮೀಸಲು ಅಂಕಿ- ಅಂಶಗಳನ್ನು ಆರ್ ಬಿಐ ಪ್ರಕಟಿಸಿದ್ದು, ಮೇ.13 ರಂದು 361.02 ರಷ್ಟಿದ್ದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿದಿದೆ ಎಂದು ಹೇಳಿದೆ. ಇನ್ನು ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿಯೂ ಇಳಿಕೆಯಾಗಿದ್ದು ಮೇ.20 ರಂದು $336.93 ರಷ್ಟಿದೆ. ಚಿನ್ನ 20.04 ಬಿಲಿಯನ್ ಡಾಲರ್ ನಷ್ಟಿದ್ದು, ಐಎಂಎಫ್ ನಲ್ಲಿರುವ ಮೀಸಲು ಹಣ 2.42 ಬಿಲಿಯನ್ ಡಾಲರ್ ನಷ್ಟಿದೆ ಎಂದು ಆರ್ ಬಿಐ ತಿಳಿಸಿದೆ.
ಏ.22 ರಂದು ಮುಕ್ತಾಯಗೊಂಡ ವಾರದಲ್ಲಿ $361.60 ಬಿಲಿಯನ್ ನಷ್ಟಿದ್ದ ವಿದೇಶ ವಿನಿಮಯ ಮೀಸಲು ಏ.29 ಕ್ಕೆ ಮುಕ್ತಾಯಗೊಂಡ ವಾರದಲ್ಲಿ 363 .12 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.