ಐಐಟಿ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಅತಿ ವೇಗದ ಕಾರು 
ವಾಣಿಜ್ಯ

ಮುಂಬೈ ಐಐಟಿ ವಿದ್ಯಾರ್ಥಿಗಳ ಸಾಧನೆ: ದೇಶದಲ್ಲೇ ಅತಿ ವೇಗವಾಗಿ ಒಡುವ ಕಾರು ತಯಾರಿಕೆ

ಭಾರತದ ಅತಿ ವೇಗವಾದ ಕಾರನ್ನು ಮುಂಬಯಿ ಐಐಟಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಕಳೆದ ಭಾನುವಾರ ಟಾಟಾ ಮೋಟಾರ್ಸ್, ಸಿಯೆಟ್ ಟೈರ್ ಸೇರಿದಂತೆ..

ನವದೆಹಲಿ:  ಭಾರತದ ಅತಿ ವೇಗವಾದ ಕಾರನ್ನು ಮುಂಬಯಿ ಐಐಟಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಕಳೆದ ಭಾನುವಾರ ಟಾಟಾ ಮೋಟಾರ್ಸ್, ಸಿಯೆಟ್ ಟೈರ್ ಸೇರಿದಂತೆ ಹಲವು ಕಂಪನಿಗಳ ಸಹಯೋಗದೊಂದಿಗೆ ಕಾರನ್ನು ಪ್ರದರ್ಶಿಸಲಾಯಿತು.

ಫಾರ್ಮುಲಾ-1 ಮಾದರಿಯ ಕಾರನ್ನು ಅಭಿವೃದ್ದಿಪಡಿಸಿರುವ ವಿದ್ಯಾರ್ಥಿಗಳು ಯುಕೆ ಯಲ್ಲಿ ನಡೆಯಲಿರುವ ನೂತನ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕಾರಿಗೆ ‘ಒರ್ಕಾ’ ಎಂದು ಹೆಸರಿಟ್ಟಿದ್ದು ಇದನ್ನು ತಯಾರಿಸಲು ಬರೊಬ್ಬರಿ 9 ತಿಂಗಳು ಅವಧಿ ತೆಗೆದುಕೊಂಡಿದ್ದಾರೆ.

ಗಂಟೆಗೆ 0-100 ಕಿ ಮೀ ವೇಗವನ್ನು ಕೇವಲ 3.47 ಸೆಕೆಂಡುಗಳಲ್ಲಿ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ಒರ್ಕಾ ಪ್ರತಿಷ್ಠಿತ ಕಾರು ಕಂಪನಿಗಳಾದ ಮರ್ಸಿಡಿಸ್, ಟೆಲ್ಸಾ, ಆಡಿ ಮಾದರಿಯ ಕಾರುಗಳಿಗೆ ಸೆಡ್ಡು ಹೊಡೆದಿದೆ. ಇದಲ್ಲದೆ ಸಂಪೂರ್ಣ ಸ್ಟೀಲ್ ಚಾಸ್ಸಿಸ್ ಜತೆಗೆ ಕಾರ್ಬನ್ ಫೈಬರ್ ಮೈಕಟ್ಟು ನೀಡಲಾಗಿದ್ದು ಇದು ವಾಹನದ ಕ್ಷಮತೆ ಮತ್ತು ವೇಗಕ್ಕೆ ಪೂರಕವಾಗಿದೆ ಎಂದು 4 ನೇ ವರ್ಷದ ವಿದ್ಯಾರ್ಥಿ ಒರ್ಕಾದ ತಯಾರಕ ತಂಡದ ರಿಶಬ್ ಕಪಾಸಿಯ ಹೇಳಿದ್ದಾರೆ.

ಯುಕೆ ಯಲ್ಲಿ ವಾರ್ಷಿಕವಾಗಿ ನಡೆಯುವ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ಭಾಗಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ವಿನ್ಯಾಸಗಳೊಂದಿಗೆ ಭಾಗವಹಿಸುತ್ತಾರೆ. ಕಳೆದ ಐದು ವರ್ಷಗಳಿಂದ ಐಐಟಿ ಮುಂಬೈ ತನ್ನ ಉತ್ಕ್ರಷ್ಟ ವಿನ್ಯಾಸಕ್ಕಾಗಿ ಪ್ರಶಸ್ತಿ ಗಳಿಸುತ್ತಾ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!