ವಾಣಿಜ್ಯ

'ಹಾನಿಕಾರಕ ಸರಕುಗಳ ಮೇಲಿನ ಸೆಸ್ ಜಿಎಸ್ ಟಿ ಭರವಸೆಗೆ ವಿರುದ್ಧ'

Srinivas Rao BV

ಚೆನ್ನೈ: ತಂಬಾಕು, ಮದ್ಯ ಸೇರಿದಂತೆ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸರಕು, ಪದಾರ್ಥಗಳ ಮೇಲೆ ಸೆಸ್ ವಿಧಿಸಲಾಗಿರುವುದು ಜಿಎಸ್ ಟಿ ಭರವಸೆಗೆ ವಿರುದ್ಧವಾಗಿದೆ ಎಂದು ತೆರಿಗೆ ಸಲಹಾ ಸಂಸ್ಥೆಯ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾನಿಕಾರಕ ಸರಕುಗಳಿಗೆ ವಿಧಿಸಲಾಗುವ ತೆರಿಗೆಗಳ ಸರಮಾಲೆಯಲ್ಲಿ ಸೆಸ್ ಕೂಡ ಸೇರ್ಪಡೆಯಾಗಲಿದೆ. ಆದರೆ ಇದಕ್ಕೆ ಪ್ರತಿಯಾಗಿ ಯಾವುದೇ ಲಾಭ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಾನಿಕಾರಕ ಪದಾರ್ಥಗಳ ಮೇಲೆ ಸೆಸ್ ವಿಧಿಸಲಾಗಿರುವುದು ಜಿಎಸ್ ಟಿಯ ಮೂಲ ಆಶಯಕ್ಕೆ, ಭರವಸೆಗೆ ಧಕ್ಕೆ ಉಂಟು ಮಾಡಲಿದೆ ಎಂದು ತೆರಿಗೆ ಸಲಹಾ ಸಂಸ್ಥೆಯ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೆಸ್ ಹಾಗೂ ಮೇಲ್ತೆರಿಗೆಗಳನ್ನು ಅಂತರ್ಗತಗೊಳಿಸಲಾಗುತ್ತದೆ ಎಂಬುಡು ಜಿಎಸ್ ಟಿಯ ಭರವಸೆಯಾಗಿತ್ತು. ಆದರೆ ಈಗ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಇದರಿಂದ ಹೊರಗಿಡಲಾಗಿರುವುದು ಜಿಎಸ್ ಟಿಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ತೆರಿಗೆ ಸಲಹಾ ಸಂಸ್ಥೆಯೊಂದರ ನೌಕರ ರಾಕೇಶ್ ಹೇಳಿದ್ದಾರೆ.

ಜಿಎಸ್ ಟಿ ಅಡಿಯಲ್ಲಿ ನಾಲ್ಕು ಹಂತದ ತೆರಿಗೆ ರಚನೆ ಭಾರತದಲ್ಲಿ ಉದ್ಯಮವನ್ನು ಪ್ರಾರಂಭಿಸುವುದನ್ನು ಸುಲಭವನ್ನಾಗಿಸಲು ಸಹಕಾರಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜಾಗತಿಕ ಶ್ರೇಯಾಂಕವನ್ನು ಸುಧಾರಿಸಿಕೊಳ್ಳಲು ನೆರವಾಗಲಿದೆ ಎಂದು ತೆರಿಗೆ ಸಲಹಾ ಸಂಸ್ಥೆಯ ನೌಕರರು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT