ಸಾಂದರ್ಭಿಕ ಚಿತ್ರ 
ವಾಣಿಜ್ಯ

2013 ಆಗಸ್ಟ್ ನಂತರ ಭಾರೀ ಕುಸಿತ ಕಂಡ ರೂಪಾಯಿ ಮೌಲ್ಯ

ಸಾಗರೋತ್ತರ ನಿಧಿ ವಲಸೆ ಹೂಡಿಕೆಯಲ್ಲಿ ಇಳಿಕೆಯ ಭೀತಿ, ಸ್ಥಳೀಯ ಹೂಡಿಕೆದಾರರಲ್ಲಿ...

ಮುಂಬೈ: ಸಾಗರೋತ್ತರ ನಿಧಿ ವಲಸೆ ಹೂಡಿಕೆಯಲ್ಲಿ ಇಳಿಕೆಯ ಭೀತಿ, ಸ್ಥಳೀಯ ಹೂಡಿಕೆದಾರರಲ್ಲಿ ಆಕರ್ಷಣೆ ಕಡಿಮೆಯಾಗಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿದಿದೆ.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 68 ರೂಪಾಯಿ 83 ಪೈಸೆಯಷ್ಟಿತ್ತು. ಕಳೆದ ಫೆಬ್ರವರಿಯಿಂದ ಕಂಡ ರೂಪಾಯಿ ಕುಸಿತದಲ್ಲಿ ಇದು ಕನಿಷ್ಠ ಮಟ್ಟದ್ದಾಗಿದೆ. ಮೂರು ವರ್ಷಗಳ ಹಿಂದೆ ಆಗಸ್ಟ್ ನಲ್ಲಿ ರೂಪಾಯಿ ಮೌಲ್ಯ 68 ರೂಪಾಯಿ 85 ಪೈಸೆಯಷ್ಟಾಗಿತ್ತು ಮತ್ತು ದಿನದ ವಹಿವಾಟು ಮುಕ್ತಾಯದ ವೇಳೆಗೆ 68 ರೂಪಾಯಿ 83 ಪೈಸೆಯಷ್ಟಾಗಿತ್ತು.
ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆಯಿರುವುದರಿಂದ ಮಾರುಕಟ್ಟೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ಮಧ್ಯೆ ರಿಸರ್ವ್ ಬ್ಯಾಂಕ್, ರೂಪಾಯಿ ಮೌಲ್ಯ ದಿಢೀರ್ ಇಳಿಕೆಯಾಗಿರುವುದನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ವಹಿವಾಟುದಾರರು ಹೇಳುತ್ತಾರೆ. ಈ ಬಗ್ಗೆ ಆರ್ ಬಿಐ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ವಿದೇಶಿ ಹೂಡಿಕೆದಾರರು ಭಾರತೀಯ ಬಾಂಡ್ ಗಳ ಮೇಲೆ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ