ಸಾಂದರ್ಭಿಕ ಚಿತ್ರ 
ವಾಣಿಜ್ಯ

ಕಪ್ಪುಹಣ ಘೋಷಿಸಿಕೊಂಡರೆ ಶೇ.50ರಷ್ಟು ತೆರಿಗೆ, ಸಿಕ್ಕಿಬಿದ್ದರೆ ಶೇ. 85ರಷ್ಟು ತೆರಿಗೆ ಹಾಗೂ ದಂಡ: ಕೇಂದ್ರ

ಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡಿರುವ ಕೇಂದ್ರ ಸರ್ಕಾರ ಕಪ್ಪು ಹಣಕ್ಕೆ ಶೇ.50 ತೆರಿಗೆ ನೀಡಿ ಬಿಳಿ ಮಾಡಿಕೊಳ್ಳಲು ಹೊಸ ಕಾನೂನು....

ನವದೆಹಲಿ: ಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡಿರುವ ಕೇಂದ್ರ ಸರ್ಕಾರ ಕಪ್ಪು ಹಣಕ್ಕೆ ಶೇ.50 ತೆರಿಗೆ ನೀಡಿ ಬಿಳಿ ಮಾಡಿಕೊಳ್ಳಲು ಹೊಸ ಕಾನೂನು ಜಾರಿಗೆ ತರುತ್ತಿದೆ. ಇದರ ನಂತರವೂ ಕಪ್ಪು ಹಣವನ್ನು ಘೋಷಿಸಿಕೊಳ್ಳದೆ ಹಣದೊಂದಿಗೆ ಸಿಕ್ಕಬಿದ್ದರೆ ಶೇ.85ರಷ್ಟು ತೆರಿಗೆ ಹಾಗೂ ದಂಡ ಕಟ್ಟಬೇಕಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ಇಂದು ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದ್ದು, ಅಪನಗದೀಕರಣೋತ್ತರ ಹಣ ಜಮಾವಣೆಯ ಮೇಲೆ ಅದರ ಶೇ.50ರ ಪ್ರಮಾಣದಲ್ಲಿ ವಿಧಿಸಲ್ಪಡುವ ಒಟ್ಟು ತೆರಿಗೆ, ದಂಡ ಮತ್ತು ಸರ್ಚಾರ್ಜ್‌ ಪ್ರಮಾಣವನ್ನು ಪ್ರಸ್ತಾವಿಸಿದ್ದಾರೆ.
ಕಪ್ಪು ಕುಳಗಳು ಘೋಷಿಸುವ ಹಣದ ಶೇ.25ರಷ್ಟನ್ನು ಬಡತನ ನಿಗ್ರಹ ಯೋಜನೆಗಳಡಿ ಕಡ್ಡಾಯವಾಗಿ, ನಿಬಡ್ಡಿಯಾಗಿ ಮತ್ತು ನಾಲ್ಕು ವರ್ಷಗಳ ಅವಧಿಯ ಬೀಗಮುದ್ರೆಗೆ ಒಳಪಡುವ, ನಿರ್ಬಂಧಗಳನ್ನು ಈ ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.
2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್‌ (ಎಂದರೆ ಇದು ಶೇ.30ರ ಮೇಲಿನ ಶೇ.33 ಪ್ರಮಾಣ) ಪಾವತಿಸಬೇಕಾಗುವುದು.
ಆರ್‌ಬಿಐ ಜತೆಗೆ ಸಮಾಲೋಚಿಸಿ ಅಧಿಸೂಚಿಸುವ ಯೋಜನೆಗಳಲ್ಲಿ ಕಾಳಧನಿಕರು ತಮ್ಮ ಅಘೋಷಿಸಿತ ಕಾಳಧನದ ಶೇ.25ರಷ್ಟನ್ನು ಹೂಡಬೇಕಾಗುವುದು ಎಂದು ಸರ್ಕಾರ ಹೇಳಿದೆ.
ಇವೆಲ್ಲದರ ಹೊರತಾಗಿಯೂ ಕಾಳಧನವನ್ನು ಘೋಷಿಸಿಕೊಳ್ಳದೆ ಕಾಲಕ್ರಮದಲ್ಲಿ  ಕಾನೂನಿನ ಕೈಗೆ ಸಿಕ್ಕಿ ಬೀಳುವ ಕಾಳಧನಿಕರು ಶೇ.60 ತೆರಿಗೆ ಮತ್ತು ಶೇ.25 ತೆರಿಗೆ ಮೇಲಿನ ಸರ್ಚಾರ್ಜ್‌ (ಶೇ.15ರ ಪ್ರಮಾಣದಲ್ಲಿ) ಪಾವತಿಸಬೇಕಾಗುವುದು ಮತ್ತು ಇದು ಒಟ್ಟಾಗಿ ಶೇ.75 ಆಗುವುದು. ಇದರ ಜತೆಗೆ ಒಂದೊಮ್ಮೆ ಅಸೆಸಿಂಗ್‌ ಅಧಿಕಾರಿಯು ತಪ್ಪುಗಾರ ಕಾಳಧನಿಕನಿಗೆ ಶೇ.10ರ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ ಎಂದು ತೀರ್ಮಾನಿಸಿದಲ್ಲಿ, ಶೇ.75 ತೆರಿಗೆಗೆ ಹೆಚ್ಚುವರಿಯಾಗಿ ಅದನ್ನು ಪಾವತಿಸಬೇಕಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!