ಜಿಡಿಪಿ 
ವಾಣಿಜ್ಯ

ಭಾರತದ ಜಿಡಿಪಿ 2016 ರಲ್ಲಿ ಶೇ.7.6, 2017 ರಲ್ಲಿ ಶೇ.7.7 ರಷ್ಟಿರಲಿದೆ: ವಿಶ್ವಬ್ಯಾಂಕ್

ದಕ್ಷಿಣ ಏಷ್ಯಾ ಆರ್ಥಿಕ ಸ್ಥಿತಿ ( ಸೌತ್ ಏಷ್ಯಾ ಎಕನಾಮಿಕ್ ಫೋಕಸ್) ಬಗ್ಗೆ ವರದಿ ಪ್ರಕಟಿಸಿರುವ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ 2016 ರಲ್ಲಿ ಶೇ.7.6 ರಷ್ಟು ಹಾಗೂ 2017 ರಲ್ಲಿ ಶೇ.7.7 ರಷ್ಟಿರಲಿದೆ ಎಂದು ಹೇಳಿದೆ.

ವಾಷಿಂಗ್ ಟನ್: ದಕ್ಷಿಣ ಏಷ್ಯಾ ಆರ್ಥಿಕ ಸ್ಥಿತಿ ( ಸೌತ್ ಏಷ್ಯಾ ಎಕನಾಮಿಕ್ ಫೋಕಸ್) ಬಗ್ಗೆ ವರದಿ ಪ್ರಕಟಿಸಿರುವ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ 2016 ರಲ್ಲಿ ಶೇ.7.6 ರಷ್ಟು ಹಾಗೂ 2017 ರಲ್ಲಿ ಶೇ.7.7 ರಷ್ಟಿರಲಿದೆ ಎಂದು ಹೇಳಿದೆ.

ಭಾರತದ ರಫ್ತು ಪ್ರಮಾಣ ಹೆಚ್ಚಿರುವುದು ಹಾಗೂ ಖಾಸಗಿ ಬಂಡವಾಳ ಚೇತರಿಕೆ ಕಂಡಿರುವುದು ಜಿಡಿಪಿ ಸದೃಢವಾಗಲು ಕಾರಣ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಇದೆ ವೇಳೆ ಸದೃಢ ಆರ್ಥಿಕ ಬೆಳವಣಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತದ ಎದುರು ಹಲವಾರು ಸವಾಲುಗಳಿವೆ ಎಂದು ಹೇಳಿರುವ ವಿಶ್ವಬ್ಯಾಂಕ್, ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಬಡತನ ತಗ್ಗಿಸುವ, ಒಳಗೊಳ್ಳುವಿಕೆಯನ್ನು ಉತ್ತೇಜಿಸುವ, ಆರೋಗ್ಯ, ಶಿಕ್ಷಣ, ಪೋಷಣೆ ವಿಷಯದಲ್ಲಿ ಮಾನವ ಅಭಿವೃದ್ಧಿ ಫಲಿತಾಂಶಗಳನ್ನು ಹೆಚ್ಚಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದು ವಿಶ್ಲೇಷಿಸಿದೆ.

ಕೃಷಿ ಕ್ಷೇತ್ರ ಹಾಗೂ ನಾಗರಿಕ ಸೇವೆಗಳ ವೇತನ ಪರಿಷ್ಕರಣೆ ಪುಟಿಯುವ ನಿರೀಕ್ಷೆ ಇದ್ದು, 2016 ರಲ್ಲಿ ಶೇ.7.6 ರಷ್ಟಿರಲಿರುವ ಜಿಡಿಪಿ 2017 ಕ್ಕೆ ಶೇ.7.7 ರಾಷ್ಟಾಗಲಿದೆ ಎಂದಿದ್ದು, ದಕ್ಷಿಣ ಏಷ್ಯಾ ಜಾಗತಿಕ ಬೆಳವಣಿಗೆಯ ಹಾಟ್ ಸ್ಪಾಟ್ ಆಗಲಿದೆ ಎಂದು ಹೇಳಿದೆ. ಇದೆ ವೇಳೆ ಪಾಕಿಸ್ತಾನ, ಬಾಂಗ್ಲಾದೇಶಗಳ ಬಗ್ಗೆಯೂ ಉಲ್ಲೇಖಿಸಿರುವ ವಿಶ್ವಬ್ಯಾಂಕ್, ಪಾಕಿಸ್ತಾನದ ಆರ್ಥಿಕ ಚಟುವಟಿಕೆ ಕ್ರಮೇಣ ಚೇತರಿಕೆ ಕಾಣುವ ಸಾಧ್ಯತೆ ಇದ್ದು 2017 ಕ್ಕೆ ಶೇ.5.0 ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.  ಆಂತರಿಕ ಸಮಸ್ಯೆಗಳಿದ್ದರೂ, ಬಾಂಗ್ಲಾದೇಶ ಸದೃಢ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಂಡಿದೆ ಎಂದು ವಿಶ್ವಬ್ಯಾಂಕ್ ಹೇಳಿದ್ದು, 2017 ರ ವೇಳೆಗೆ ಶೇ.6.8 ರಷ್ಟು ಜಿಡಿಪಿ ಸಾಧಿಸಲಿದೆ ಎಂದು ಅಂದಾಜಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ