ನವದೆಹಲಿ: ಅಮೆರಿಕದಲ್ಲಿ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಹಳದಿ ಲೋಹದಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ಬಂಗಾರದ ದರ ಬುಧವಾರ ಒಂದೇ ದಿನ 730 ರೂ.ರಷ್ಟು ಕಡಿಮೆಯಾಗಿದೆ. ಈಗ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 30,520 ರೂ.ಆಗಿದೆ. ಚಿನ್ನದ ಬೆಲೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೆಳ್ಳಿಯ ದರ ಕೂಡ ಪ್ರತಿ ಕೆ.ಜಿಗೆ 1,750 ರೂ. ಕುಸಿದಿದ್ದು, 43,250 ರೂ.ಗೆ ಇಳಿದೆದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕಳದ ಜೂನ್ ನಂತರ ಇದೇ ಮೊದಲ ಬಾರಿಗೆ ಪ್ರತಿ ಔನ್ಸಿಗೆ 1,300 ಡಾಲರ್‌ಗೆ ಕುಸಿಯಿತು. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಶೀಘ್ರದಲ್ಲಿಯೇ ದರ ಏರಿಕೆ ಮಾಡುವ ಸಾಧ್ಯತೆ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.