ಚೆನ್ನೈ: ಭಾರತದ ವಿದೇಶಿ ವಿನಿಮಯ ಮೀಸಲು ಮೊತ್ತ ಕಳೆದ ಸೆಪ್ಟೆಂಬರ್ 30ಕ್ಕೆ 371.99 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಂಕಿಅಂಶ ಪ್ರಕಾರ, ಸೆಪ್ಟೆಂಬರ್ 23ಕ್ಕೆ ಇದೇ ಮೊತ್ತ 370. 76 ಶತಕೋಟಿ ಡಾಲರ್ ನಷ್ಟಿತ್ತು. ಒಂದು ವಾರದಲ್ಲಿ 1 ಡಾಲರ್ ನಷ್ಟು ಏರಿಕೆಯಾಯಿತು ಎಂದು ಹೇಳಿದೆ.
ಸೆಪ್ಟೆಂಬರ್ 30ಕ್ಕೆ ವಿದೇಶಿ ಕರೆನ್ಸಿ ಸಂಪತ್ತು 346.71 ಶತಕೋಟಿ ಡಾಲರ್ ನಲ್ಲಿ ನಿಂತಿತ್ತು. ಚಿನ್ನ 21.40 ಶತಕೋಟಿ ಡಾಲರ್, ವಿಶೇಷ ಹಿಂಪಡೆತ ಹಕ್ಕಿನಡಿ 1.4 ಶತಕೋಟಿ ಡಾಲರ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಡಿ ಮೀಸಲು ಮೊತ್ತದ ಸ್ಥಾನ 2.38 ಶತಕೋಟಿ ಡಾಲರ್ ನಲ್ಲಿ ನಿಂತಿದೆ ಎಂದು ರಿಸರ್ವ್ ಬ್ಯಾಂಕ್ ಘೋಷಿಸಿದೆ.