ವಾಣಿಜ್ಯ

ಕೇವಲ 26 ದಿನಗಳಲ್ಲಿ ರಿಲಾಯನ್ಸ್ ಜಿಯೋ ಸಿಮ್ ಖರೀದಿಸಿದ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತೇ?

Shilpa D

ಮುಂಬೈ: ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. `ಜಿಯೋ ವೆಲ್‍ಕಮ್ ಆಫರ್’ಗೆ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿರುವುದಾಗಿ ರಿಲಯನ್ಸ್ ಹೇಳಿದೆ.

16 ಮಿಲಿಯನ್‍ಗೂ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ)ಇಂದು ಘೋಷಿಸಿದೆ. ಜಿಯೋ ಈ ಪ್ರಗತಿಯನ್ನು ವಿಶ್ವದಲ್ಲೇ ಯಾವುದೇ ಟೆಲಿಕಾಂ ಆಪರೇಟರ್ ಅಥವಾ ಫೇಸ್‍ಬುಕ್, ವಾಟ್ಸಪ್ ಮತ್ತು ಸ್ಕೈಪ್‍ನಂತಹ ಸ್ಟಾರ್ಟ್ ಅಪ್‍ಗಿಂತಲೂ ವೇಗವಾಗಿ ಸಾಧಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಡಿ. ಅಂಬಾನಿ, ಜಿಯೋ ವೆಲ್‍ಕಮ್ ಆಫರ್‍ಗೆ ಭಾರತದಾದ್ಯಂತ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ. ಇದಕ್ಕಾಗಿ ನಾವು ಗ್ರಾಹಕರಿಗೆ ಆಭಾರಿಗಳಾಗಿದ್ದೇವೆ. ಗ್ರಾಹಕರ ನಿರೀಕ್ಷೆಯನ್ನು ಮೀರಲು ಪ್ರತಿದಿನವೂ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT