ವಾಣಿಜ್ಯ

ಮಾರುಕಟ್ಟೆಯಲ್ಲಿ ಜಿಗಿದ ನೆಟ್ ಫ್ಲಿಕ್ಸ್ ಷೇರು: ಶೇಕಡಾ 20ರಷ್ಟು ಹೆಚ್ಚಳ

Sumana Upadhyaya
ವಿಡಿಯೋ ಸ್ಟ್ರೀಮಿಂಗ್ ಕಂಪೆನಿಯಾದ ನೆಟ್ಫಿಕ್ಸ್ ಇಂಕ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಗ್ರಾಹಕರನ್ನು ಸೇರಿಸಿದೆ.
ಕಳೆದ ತ್ರೈಮಾಸಿಕದಲ್ಲಿ ಕಂಪೆನಿಯ ಫಲಿತಾಂಶ ಕಳಪೆ ಮಟ್ಟದ್ದಾಗಿತ್ತು. ತನ್ನ ಸ್ವದೇಶಿ ಮಾರುಕಟ್ಟೆಯನ್ನು ಬಿಟ್ಟು ವಿದೇಶಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ನೋಡುತ್ತಿರುವ ನೆಟ್ ಫ್ಲಿಕ್ಸ್ ಮುಂದಿನ ವರ್ಷ  ಜಾಗತಿಕ ಮಟ್ಟದಲ್ಲಿ ಲಾಭವನ್ನು ನಿರೀಕ್ಷಿಸುತ್ತಿದೆ.
ಮೂರನೇ ತ್ರೈಮಾಸಿಕದಲ್ಲಿ ನೆಟ್ ಫ್ಲಿಕ್ಸ್ 3.20 ದಶಲಕ್ಷ ಗ್ರಾಹಕರನ್ನು ಸೇರಿಸಿದ್ದು ಅಮೆರಿಕಾದಲ್ಲಿ 3 ಲಕ್ಷದ 70 ಸಾವಿರ ಗ್ರಾಹಕರಿದ್ದಾರೆ. ಕಂಪೆನಿಯ ಮೂರನೇ ತ್ರೈಮಾಸಿಕದಲ್ಲಿ ಆದಾಯ 31.7 ಶೇಕಡಾದಷ್ಟು ಹೆಚ್ಚಳವಾಗಿದ್ದು ಡಾಲರ್ 2.29 ಶತಕೋಟಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 30 ಲಕ್ಷಕ್ಕೂ ಮೀರಿ ಗ್ರಾಹಕರನ್ನು ಸೆಳೆಯಲು ಅದು ನಿರೀಕ್ಷಿಸುತ್ತಿದೆ.
ಕಂಪೆನಿಯು ವಿಶ್ವಾದ್ಯಂತ 130ಕ್ಕೂ ಅಧಿಕ ಮಾರುಕಟ್ಟೆಗಳನ್ನು ಹೊಂದಿದ್ದು ಚೀನಾದಲ್ಲಿ ಮಾತ್ರ ಇದುವರೆಗೆ ಅಧಿಪತ್ಯ ಸ್ಥಾಪಿಸಿಲ್ಲ. ಅಲ್ಲಿ ಕೂಡ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. 
SCROLL FOR NEXT