ಮುಂಬೈ: ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಗೋವಾದಲ್ಲಿರುವ ಐಷಾರಾಮಿ ಕಿಂಗ್ ಫಿಶರ್ ವಿಲ್ಲಾವನ್ನು ಖರೀದಿ ಮಾಡುವವರೆ ಇಲ್ಲ.
ಹೌದು, ವಿಜಯ್ ಮಲ್ಯ ಅವರ ಆಸ್ತಿ ಹರಾಜು ಹಾಕಿ ಸಾಲ ವಸೂಲಿ ಮಾಡುವ ಬ್ಯಾಂಕ್ ಗಳ ಯತ್ನ ಇಂದು ಮತ್ತೆ ವಿಫಲವಾಗಿದೆ. ವಿಜಯ್ ಮಲ್ಯ ಅವರಿಗೆ ಸೇರಿದ ಐಷಾರಾಮಿ ಕಿಂಗ್ ಫಿಶರ್ ವಿಲ್ಲಾವನ್ನು ಸ್ಟೇಟ್ ಬ್ಯಾಂಕ್ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟ ಇಂದು ಮಾರಾಟಕ್ಕೆ ಇಟ್ಟಿದ್ದವು. 85.3ಕೋಟಿ ರು. ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿತ್ತು. ಆದರೆ ಆದರೆ ಬ್ಯಾಂಕ್ ನಿಗದಿ ಪಡಿಸಿರುವ ಮೂಲ ಬೆಲೆ ಹೆಚ್ಚಾಯಿತು ಎಂದು ಯಾರೂ ಬಿಡ್ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.
12,350 ಚದರ ಮೀಟರ್ ವಿಸ್ತೀರ್ಣದ ಬಂಗಲೆಯನ್ನು ಸುದೀರ್ಘ ಕಾನೂನು ಸಮರ ಬಳಿಕ ಬ್ಯಾಂಕ್‌ಗಳು ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ (ಯುಬಿಎಚ್‌ಎಲ್)ನಿಂದ ಕಳೆದ ಮೇ ತಿಂಗಳಲ್ಲಿ ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದವು. ಈ ಸ್ವತ್ತನ್ನು ಮಾರಾಟ ಮಾಡಿ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಾಲವನ್ನು ತುಂಬುವ ಇರಾದೆಯನ್ನು ಬ್ಯಾಂಕ್‌ಗಳು ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics