ವಾಣಿಜ್ಯ

3 ದಿನಗಳ ನಂತರ ಮತ್ತೆ ಪುಟಿದೆದ್ದ ಟಾಟಾ ಗ್ರೂಪ್ಸ್ ಷೇರುಗಳ ಬೆಲೆ

Sumana Upadhyaya
ನವದೆಹಲಿ: ಮೂರು ದಿನಗಳ ಸತತ ಇಳಿಮುಖದ ನಂತರ ಇಂದು(ಶುಕ್ರವಾರ)ಟಾಟಾ ಗ್ರೂಪ್ಸ್ ನ ಷೇರು ಸಂವೇದಿ ಸೂಚ್ಯಂಕ ಶೇಕಡಾ 5.6ರಷ್ಟು ಏರಿಕೆಯಾಗಿದೆ. ಟಾಟಾ ಮೋಟಾರ್ಸ್ ಶೇಕಡಾ 2.89ರಷ್ಟು ಹೆಚ್ಚಾದರೆ, ಟಾಟಾ ಸ್ಟೀಲ್ ಶೇಕಡಾ 1.81ರಷ್ಟು ಮತ್ತು ಟಾಟಾ ಪವರ್ ಶೇಕಡಾ 1.75ರಷ್ಟು ಏರಿಕೆ ಕಂಡುಬಂದಿದೆ.
ಅದಲ್ಲದೆ ಟಾಟಾ ಮೆಟಲಿಕ್ಸ್ ಶೇಕಡಾ 5.57ರಷ್ಟು, ಟಾಟಾ ಎಲ್ಕ್ಸಿಸಿ ಶೇಕಡಾ 4.95, ಟಾಟಾ ಟೆಲಿ ಸರ್ವಿಸ್ ಶೇಕಡಾ 4.51ರಷ್ಟು, ಟಾಟಾ ಕಮ್ಯುನಿಕೇಶನ್ಸ್ ಶೇಕಡಾ 3.87ರಷ್ಟು, ಟಾಟಾ ಗ್ಲೋಬಲ್ ಬಿವರೇಜ್ ಶೇಕಡಾ 2.42ರಷ್ಟು, ಟಾಟಾ ಕಾಫಿ ಶೇಕಡಾ 2.25ರಷ್ಟು, ಟಾಟಾ ಕೆಮಿಕಲ್ಸ್ ಶೇಕಡಾ 1.78ರಷ್ಟು ಮತ್ತು ಇಂಡಿಯನ್ ಹೊಟೇಲ್ಸ್ ಶೇಕಡಾ 0.86ರಷ್ಟು ಏರಿಕೆಯಾಗಿದೆ.
ಆದರೆ ಇಂದು ಷೇರು ಪೇಟೆ ವಹಿವಾಟು ಆರಂಭವಾಗುವ ಹೊತ್ತಿಗೆ ಟಿಸಿಎಸ್ ಇಳಿಮುಖವಾಗಿತ್ತು. ಟಾಟಾ ಸನ್ಸ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯವರನ್ನು ಪದಚ್ಯುತಗೊಳಿಸಿದ ನಂತರ ಟಾಟಾ ಗ್ರೂಪ್ಸ್ ನ ಎಲ್ಲಾ ಷೇರುಗಳು ಮಂಗಳವಾರದಿಂದ ನಿನ್ನೆಯ ತನಕ ಸತತ ಇಳಿಕೆ ಕಂಡುಬಂದಿತ್ತು. ಇದರಿಂದಾಗಿ ಸುಮಾರು 26 ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗಿತ್ತು. 
SCROLL FOR NEXT