ಮುಂಬಯಿ: ಟಾಟಾ ಗ್ರೂಪ್ ನಿಂದ ಸೈರಸ್ ಮಿಸ್ತ್ರಿ ಅವರನ್ನು ಹೊರ ಹಾಕಿದ ನಂತರ ಟಾಟಾ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗ ಮುಖ್ಯಸ್ಥ ಎನ್.ಎಸ್ ರಾಜನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಟಾಟಾ ಗ್ರೂಪ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ಜೊತೆಗೆ ಗ್ರೂಪ್ ಎಕ್ಸಿಕ್ಯೂಟಿವ್ ಕೌನ್ಸಿಲ್ ನ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
2013 ರ ಮೇ ತಿಂಗಳಲ್ಲಿ ರಾಜನ್ ಗ್ರೂಪ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಸೇರ್ಪಡೆಗೊಂಡಿದ್ದರು. ಸೋಮವಾರ ಟಾಟಾ ಅವರ ಮಕ್ಕಳು ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಿಗ ಹಿನ್ನೆಲೆಯಲ್ಲಿ ರಾಜನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗ್ರೂಪ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಟಾಟಾ ಗ್ರೂಪ್ ತಮ್ಮ ವೆಬ್ ಸೈಟ್ ನಿಂದ ತೆಗೆದು ಹಾಕಿದೆ.