ಊರ್ಜಿತ್ ಪಟೇಲ್(ಸಂಗ್ರಹ ಚಿತ್ರ)
ನವದೆಹಲಿ: ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇದುವರೆಗೆ ಪ್ರಚಾರದಿಂದ ದೂರವುಳಿದಿದ್ದ ಉರ್ಜಿತ್ ಪಟೇಲ್ 2013ರಿಂದ ಇಲ್ಲಿಯವರೆಗೆ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಕೂಡ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಹಣ ಮಾರುಕಟ್ಟೆ, ಬ್ಯಾಂಕಿಂಗ್ ವಲಯ ಸುಧಾರಣೆ, ಪಿಂಚಣಿ ನಿಧಿ ಸುಧಾರಣೆಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ವಿಕಾಸ ಮೊದಲಾದ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿದ್ದರು.
ಊರ್ಜಿತ್ ಪಟೇಲ್ ಹಲವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಮಟ್ಟದ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಕೇಲ್ಕರ್ ಸಮಿತಿಯ ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆ ಪಿಂಚಣಿ ವ್ಯವಸ್ಥೆಯ ಪರಾಮರ್ಶೆಗಿರುವ ಉನ್ನತ ಮಟ್ಟದ ತಜ್ಞರ ಸಮಿತಿ, ಪ್ರಧಾನ ಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾರ್ಯಪಡೆ, ಟೆಲಿಕಾಂ ಮ್ಯಾಟರ್ಸ್ ನ ಸಚಿವರ ಗುಂಪು, ನಾಗರಿಕ ವಿಮಾನಯಾನ ಸುಧಾರಣೆಯ ಸಮಿತಿ, ಇಂಧನ ತಜ್ಞರ ಗುಂಪಿನ ಸಚಿವಾಲಯ ಮೊದಲಾದ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ, ಮ್ಯಾಗಜೀನ್ ಗಳಿಗೆ ಊರ್ಜಿತ್ ಪಟೇಲ್ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics