ವಾಣಿಜ್ಯ

ಸತತ ಎರಡನೇ ವರ್ಷ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 16 ಸ್ಥಾನಗಳ ಏರಿಕೆ ಕಂಡ ಭಾರತ

Sumana Upadhyaya
ನವದೆಹಲಿ: ಜಾಗತಿಕ ಸ್ಪರ್ಧಾತ್ಮಕತೆಯ ಸೂಚ್ಯಂಕದಲ್ಲಿ ಭಾರತ 16 ಸ್ಥಾನಗಳ ಏರಿಕೆ ಕಂಡು 39ನೇ ಸ್ಥಾನಕ್ಕೆ ತಲುಪಿದೆ. ವಿಶ್ವ ಆರ್ಥಿಕ ವೇದಿಕೆ ತಯಾರಿಸಿದ ಈ ಸೂಚ್ಯಂಕ ನರೇಂದ್ರ ಮೋದಿ ಸರ್ಕಾರದ ಸುಧಾರಣಾ ಕ್ರಮಗಳಿಗೆ ಇದು ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಲಿದೆ.
ವಿಶ್ವ ಆರ್ಥಿಕ ವೇದಿಕೆಯು 138 ದೇಶಗಳ ಜಾಗತಿಕ ಸ್ಪರ್ಧಾತ್ಮಕತೆಯ ಸೂಚ್ಯಂಕ ಸ್ಪರ್ಧಾತ್ಮಕತೆಯ ಭೂದೃಶ್ಯ ಮೌಲ್ಯಮಾಪನ ಮಾಡುತ್ತಿದ್ದು, ದೇಶದ ಉತ್ಪಾದನೆ ಮತ್ತು ಸಮೃದ್ಧತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಕಳೆದ ವರ್ಷ ಭಾರತ ವಿಶ್ವಮಟ್ಟದ ಆರ್ಥಿಕತೆಯಲ್ಲಿ 55ನೇ ಸ್ಥಾನದಲ್ಲಿತ್ತು. ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತ, ಚೀನಾ ನಂತರ ಎರಡನೇ ಅತಿ ಹೆಚ್ಚು ಸ್ಪರ್ಧೆ ಒಡ್ಡುವ ದೇಶವಾಗಿದೆ. ಚೀನಾಕ್ಕೆ ವಿಶ್ವ ಆರ್ಥಿಕ ಸೂಚ್ಯಂಕದಲ್ಲಿ 28ನೇ ಸ್ಥಾನವಿದೆ.
ಸತತ 8ನೇ ಅವಧಿಗೆ ಸ್ವಿರ್ಜರ್ಲೆಂಡ್ ಮೊದಲ ಸ್ಥಾನದಲ್ಲಿದ್ದು ಸಿಂಗಾಪೂರ ಮತ್ತು ಅಮೆರಿಕಾ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಭಾರತ 4.52ರಲ್ಲಿದ್ದರೆ, ಸ್ವಿಜರ್ಲೆಂಡ್ ನ ಸೂಚ್ಯಂಕ 5.81ರಷ್ಟಿದೆ. 
4ನೇ ಸ್ಥಾನದಲ್ಲಿ ನೆದರ್ಲಾಂಡ್, 5,6,7,8,9 ಮತ್ತು 10ನೇ ಸ್ಥಾನದಲ್ಲಿ ಜರ್ಮನಿ, ಸ್ವೀಡನ್, ಇಂಗ್ಲೆಂಡ್, ಜಪಾನ್, ಹಾಂಗ್ ಕಾಂಗ್ ಮತ್ತು ಫಿನ್ ಲ್ಯಾಂಡ್ ದೇಶಗಳಿವೆ. ಸರಕು ಮಾರುಕಟ್ಟೆಯ ದಕ್ಷತೆ, ವ್ಯಾಪಾರ ಸಂಕೀರ್ಣತೆಗೆ, ಮತ್ತು ನಾವೀನ್ಯತೆ ವಿಷಯದಲ್ಲಿ ಭಾರತದ ಸ್ಪರ್ಧಾತ್ಮಕತೆ ಸುಧಾರಣೆಯಾಗಿದೆ.
SCROLL FOR NEXT