ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಅಟೋಮೊಬೈಲ್ ಉತ್ಪಾದಕ ಮಾರುತಿ ಸುಜೂಕಿ ಸಂಸ್ಥೆಯ ಕಾರುಗಳ ಮಾರಾಟ ಶೇ.31.1 ರಷ್ಟು ಏರಿಕೆಯಾಗಿದೆ.
ಶನಿವಾರ ಮಾರುತಿ ಸುಜೂಕಿ ಸಂಸ್ಥೆ ಅಂಕಿ- ಅಂಶ ಬಿಡುಗಡೆ ಮಾಡಿದ್ದು ಸೆಪ್ಟೆಂಬರ್ ತಿಂಗಳ ಮಾರಾಟ ಶೇ. 31.1 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 113, 759 ಯುನಿಟ್ ಗಳಷ್ಟು ಮಾರಾಟವಾಗಿದ್ದರೆ ಪ್ರಸಕ್ತ ತಿಂಗಳಲ್ಲಿ 149,143 ಯುನಿಟ್ ಗಳಷ್ಟು ಕಾರು ಮಾರಾಟವಾಗಿದೆ ಎಂದು ಹೇಳಿದೆ.
149.143 ಯುನಿಟ್ ಗಳಷ್ಟು ಕಾರುಗಳು ಮಾರಾಟವಾಗುವ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಹಿಂದೆಂದೂ ಆಗಿರದಷ್ಟು ದಾಖಲೆಯ ಕಾರುಗಳು ಮಾರಾಟವಾಗಿವೆ. ಕಳೆದ ತಿಂಗಳಲ್ಲಿ ದೇಶೀ ಮಾರುಕಟ್ಟೆಯಲ್ಲಿ 137,321 ಯುನಿಟ್ ಗಳಷ್ಟು ಕಾರು ಮಾರಾಟವಾಗಿ, ಮಾರಾಟ ಶೇ.29.4 ರಷ್ಟು ಏರಿಕೆಯಾಗಿತ್ತು. ಇದೆ ವೇಳೆ ಸಂಸ್ಥೆಯ ರಫ್ತು ಪ್ರಮಾಣ ಸಹ ಶೇ.54 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ 7,676 ಯುನಿಟ್ ಗಳಷ್ಟು ರಫ್ತಾಗಿದ್ದರೆ ಈ ವರ್ಷದ ಸೆಪ್ಟೆಂಬರ್ ನಲ್ಲಿ 11,822 ಯುನಿಟ್ ಗಳಷ್ಟು ಕಾರುಗಳು ರಫ್ತಾಗಿವೆ.