ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಪುಟಿದೆದ್ದ ರೈಲ್ವೆ ಇಲಾಖೆ: ಸಾರ್ವಕಾಲಿಕ ಹೆಚ್ಚಿನ ಆದಾಯ ದಾಖಲು

ರೈಲ್ವೆ ಇಲಾಖೆ ಸಾರ್ವಕಾಲಿಕ ಹೆಚ್ಚಿನ ಆದಾಯ ಗಳಿಸಿದ್ದು, ಈಗಷ್ಟೇ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ 1.68 ಲಕ್ಷ ಕೋಟಿ ಆದಾಯ ದಾಖಲಾಗಿದ್ದು, ಪ್ರಮುಖವಾಗಿ ಸರಕು ಸಾಗಣೆಯಿಂದ ಹೆಚ್ಚಿನ ಆದಾಯ ಬಂದಿದೆ.

Srinivas Rao BV
Updated On : 3 Apr 2017, 6:12 am
ನವದೆಹಲಿ: ರೈಲ್ವೆ ಇಲಾಖೆ ಸಾರ್ವಕಾಲಿಕ ಹೆಚ್ಚಿನ ಆದಾಯ ಗಳಿಸಿದ್ದು, ಈಗಷ್ಟೇ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ 1.68 ಲಕ್ಷ ಕೋಟಿ ಆದಾಯ ದಾಖಲಾಗಿದ್ದು, ಪ್ರಮುಖವಾಗಿ ಸರಕು ಸಾಗಣೆಯಿಂದ ಹೆಚ್ಚಿನ ಆದಾಯ ಬಂದಿದೆ. 
ಮಾ.31 ರ ವರೆಗೆ ರೈಲ್ವೆ ಇಲಾಖೆ 1.07 ಬಿಲಿಯನ್ ಟನ್ ಗಳಷ್ಟು ಸರಕನ್ನು ಸಾಗಣೆ ಮಾಡಿದ್ದು, ಅಂದಾಜಿಸಿದ್ದಕ್ಕಿಂತ ಹೆಚ್ಚು ಪ್ರಮಾಣದ ಸರಕನ್ನು ಸಾಗಣೆ ಮಾಡಲಾಗಿದೆ. ಇನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.07 ಬಿಲಿಯನ್ ಸರಕು ಸಾಗಣೆ ಮಾಡುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಇಲಾಖೆ ಸಚಿವ ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ. 2017 ರ ಪ್ರಾರಂಭದಲ್ಲಿ ಸರಕು ಸಾಗಣೆ ಹಾಗೆಯೇ ಪ್ರಯಾಣಿಕರ ಸಂಖ್ಯೆಯೂ ಕುಸಿದಿತ್ತು. ಆದರೆ ಸಚಿವಾಲಯ ಮಧ್ಯಪ್ರವೇಶಿಸಿದ್ದರಿಂದ ಮತ್ತೆ ಬೆಳವಣಿಗೆಯ ಹಾದಿ ಹಿಡಿಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 
ಪ್ರಯಾಣಿಕರ ವಿಭಾಗದಲ್ಲಿ ರೈಲ್ವೆ ಇಲಾಖೆ ಸುಮಾರು 48,000 ಕೋಟಿ ಲಾಭಗಳಿಸಿದ್ದು, ಕಳೆದ ವರ್ಷಕ್ಕಿಂತಲೂ 2,000 ಕೋಟಿ ರೂ ಅಧಿಕ ಲಾಭ ಗಳಿಸಿದೆ. ಇನ್ನು ಸರಕು ಸಾಗಣೆ ವಿಭಾಗದಲ್ಲಿ ಕಳೆದ ಬಾರಿ 1.04 ಲಕ್ಷ ಕೋಟಿ ಲಾಭವಾಗಿದ್ದರೆ ಈ ವರ್ಷ 1.09 ಲಕ್ಷ ಕೋಟಿ ಲಾಭ ಉಂಟಾಗಿದೆ. ಉಳಿದಂತೆ ಜಾಹೀರಾತು,  ಸ್ಕ್ರ್ಯಾಪ್ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ 11,000 ಕೋಟಿ ಲಾಭ ಬಂದಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement