ಅಹಮದಾಬಾದಿನ ಸಣ್ಣ-ಪ್ರಮಾಣದ ಉತ್ಪಾದನಾ ಘಟಕ 
ವಾಣಿಜ್ಯ

2017-18ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇಕಡಾ 7.4ಕ್ಕೆ ಹೆಚ್ಚಳ: ಎಡಿಬಿ

ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡಾ 7.4ರಷ್ಟು ಅಭಿವೃದ್ಧಿ ಹೊಂದಲಿದ್ದು...

ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡಾ 7.4ರಷ್ಟು ಅಭಿವೃದ್ಧಿ ಹೊಂದಲಿದ್ದು ನಂತರದ ವರ್ಷ ಶೇಕಡಾ 7.6ಕ್ಕೆ ಏರಿಕೆಯಾಗಿ ಚೀನಾಕ್ಕಿಂತ ಮುಂದೆ ಸಾಗಲಿದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ) ತಿಳಿಸಿದೆ.
 ಅಧಿಕ ಮೌಲ್ಯದ ಬ್ಯಾಂಕು ನೋಟುಗಳ ಚಲಾವಣೆ ಹಿಂತೆಗೆತದ ಪರಿಣಾಮ  ಸ್ವಲ್ಪ ಸಮಯ ವ್ಯಾಪಾರ ವಹಿವಾಟಿಗೆ ಅನನುಕೂಲವಾದರೂ ಕೂಡ ಇದರಿಂದ ಸಾಕಷ್ಟು ಆರ್ಥಿಕ ಸುಧಾರಣೆಯಾಗಿದೆ. ವ್ಯಾಪಾರ ವಿಶ್ವಾಸ ಮತ್ತು ಹೂಡಿಕೆ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು ಎಡಿಬಿ ಪ್ರಮುಖ ಆರ್ಥಿಕ ಪ್ರಕಟಣೆಯಲ್ಲಿ ತಿಳಿಸಿದೆ.
2016-17ರಲ್ಲಿ ಭಾರತದಲ್ಲಿ ಶೇಕಡಾ 7.1ರಷ್ಟು ಪ್ರಗತಿಯಾಗಿದ್ದು, ಅಧಿಕ ಮೌಲ್ಯದ ನೋಟುಗಳ ರದ್ಧತಿಯಿಂದ ದೇಶದ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದೇ ಹಲವರು ಭಾವಿಸಿದ್ದರು. ಅದಕ್ಕೆ ವ್ಯತಿರಿಕ್ತವಾಗಿ 2017-18ರಲ್ಲಿ ಶೇಕಡಾ 7.4ಕ್ಕೆ ಏರಿಕೆಯಾಗಿದೆ. 2018-19ರಲ್ಲಿ ಅದು ಶೇಕಡಾ 7.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಚೀನಾ ದೇಶದ  ಆರ್ಥಿಕ ಪ್ರಗತಿ ಶೇಕಡಾ 6.5ರಷ್ಟು 2017 ರಲ್ಲಿ ಕಾಣುವ ನಿರೀಕ್ಷೆಯಿದ್ದರೆ 2018ರಲ್ಲಿ ಅದಕ್ಕಿಂತ ಕಡಿಮೆ 6.2ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. 2016ರಲ್ಲಿ ಚೀನಾ ದೇಶದ ಆರ್ಥಿಕ ಪ್ರಗತಿ ಶೇಕಡಾ 6.7ರಷ್ಟಾಗಿತ್ತು.
ಸರಕು ಮತ್ತು ಸೇವಾ ತೆರಿಗೆ ಜುಲೈಯಲ್ಲಿ ಆರಂಭವಾಗಲಿದ್ದು ನಂತರದ ಆರ್ಥಿಕ ಪ್ರಗತಿ ಹೇಗಿರುತ್ತದೆ ಎಂಬ ಕುತೂಹಲ ಆರ್ಥಿಕ ತಜ್ಞರಿಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್