ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ 2017–18ನೆ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ಪರಾಮರ್ಶೆ ವರದಿಯನ್ನು ಗುರುವಾರ ಪ್ರಕಟಿಸಿದ್ದು, ರೆಪೊ ದರ(ಬ್ಯಾಂಕ್‍ಗಳು ಆರ್ ಬಿ ಐನಿಂದ ಪಡೆಯುವ ಹಣದ ಮೇಲಿನ ಬಡ್ಡಿದರ)ದಲ್ಲಿ ಯಾವುದೇ ಬದಲಾವಣೆ ಮಾಡದೆ ಈಗ ಇರುವ ಶೇ. 6.25ರ ಸ್ಥಿತಿಯನ್ನೇ ಕಾಪಾಡಿಕೊಳ್ಳಲು ಮುಂದಾಗಿದೆ.
ಆರ್ ಬಿಐ ಕಳೆದ ಅಕ್ಟೋಬರ್ ನಿಂದ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಶೇ.5.75 ರಷ್ಟಿದ್ದ ರಿವರ್ಸ್ ರೆಪೊ ದರವನ್ನು ಶೇ.6ಕ್ಕೆ ಏರಿಕೆ ಮಾಡಿದೆ.
ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಹಣದುಬ್ಬರ ದರದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದ್ದರಿಂದ ಶೇ.6.25ರಷ್ಟಿದ್ದ ರಿಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ ಬಿಐ ತೀರ್ಮಾನಿಸಿತ್ತು.
ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುವ 2017-18ರ ವಿತ್ತ ವರ್ಷದಲ್ಲಿ ಶೇ. 6.7ರಿಂದ ಶೇ.7.4ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.