ಏರ್ ಟೆಲ್ 
ವಾಣಿಜ್ಯ

ಜಿಯೋ ಧನ್ ಧನಾ ಧನ್ ಆಫರ್ ಗೆ ಪ್ರತಿಯಾಗಿ ಏರ್ ಟೆಲ್ ನಿಂದ ಹಾಲಿಡೇ ಸರ್ಪ್ರೈಸ್

ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ..

ನವದೆಹಲಿ: ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಬಂಪರ್ ಯೋಜನೆಯೊಂದನ್ನು ಹೊರಬಿಟ್ಟಿದೆ.
ಡಬಲ್  ಹಾಲಿಡೇ ಸರ್ಪ್ರೈಸ್ ಘೋಷಣೆ ಮಾಡಿರುವ ಏರ್ ಟೆಲ್,  ಏಪ್ರಿಲ್ 13, 2017 ರವರೆಗೂ ಲಭ್ಯವಿದ್ದ 10 ಜಿಬಿ ಉಚಿತ ಇಂಟರ್' ನೆಟ್ ಆಫರ್' ಅನ್ನು ಮೂರು ತಿಂಗಳು ವಿಸ್ತರಿಸಿದೆ. ಪ್ರತಿ ತಿಂಗಳು 10 ಜಿಬಿ ಡಾಟಾದಂತೆ 3 ತಿಂಗಳು 30 ಜಿಬಿ ಡಾಟಾ ಬಳಸಿಕೊಳ್ಳಬಹುದಾಗಿದೆ. 
ಮೊನ್ನೆಯಷ್ಟೇ ಜಿಯೋ 309 ರೂ.ಗಳ ಡಾಟಾ ಪ್ಯಾಕ್ ಬಿಡುಗಡೆ ಮಾಡಿತ್ತು. ಅದಕ್ಕೆ ಸಡ್ಡು ಹೊಡೆಯುವಂತೆ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಕೇವಲ 244 ರೂ. ಬೆಲೆಯಲ್ಲಿ ಮಾಸಿಕ 70 ಜಿಬಿ 4 ಜಿ ಡಾಟಾ ಒದಗಿಸಲಿದೆ. ಇದರ ಜತೆಗೆ ಪ್ರತಿದಿನ 300 ನಿಮಿಷಗಳ ಏರ್ ಟೆಲ್ ಟು ಏರ್ ಟೆಲ್ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಒದಗಿಸುತ್ತಿದೆ. ನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 0.10 ಪೈಸೆ ದರವಿರುತ್ತದೆ. ಚಂದದಾರರು ಈ ಸೌಲಭ್ಯವನ್ನು ಏ.30 ರವರೆಗೂ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ