ವಾಣಿಜ್ಯ

2016-17ನೇ ಸಾಲಿನ ಕಾರ್ಮಿಕರ ಭವಿಷ್ಯನಿಧಿಗೆ ಶೇಕಡಾ 8.65 ಬಡ್ಡಿದರ ನಿಗದಿ

Sumana Upadhyaya
ನವದೆಹಲಿ: 2016-17ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನಿಗದಿಪಡಿಸುವಂತೆ ಹಣಕಾಸು ಸಚಿವಾಲಯ ಕಾರ್ಮಿಕ ಸಚಿವಾಲಯಕ್ಕೆ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಸುಮಾರು 4 ಕೋಟಿ ನೌಕರರ ಭವಿಷ್ಯ ನಿಧಿ ಸಂಘದ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ. 
ಭವಿಷ್ಯನಿಧಿ ಸಂಘಟನೆ ಅಂದಾಜಿನ ಪ್ರಕಾರ, ಕಳೆದ ವರ್ಷದ ಭವಿಷ್ಯನಿಧಿಗೆ ಶೇಕಡಾ 8.65 ಬಡ್ಡಿದರ ನೀಡಿದ ನಂತರ ಹಣದ ಉಳಿತಾಯ ಕಾಣಲಿದೆ. ಭವಿಷ್ಯನಿಧಿ ಬಡ್ಡಿದರವನ್ನು ಇನ್ನಷ್ಟು ಕಡಿಮೆ ಮಾಡುವಂತೆ ಹಣಕಾಸು ಸಚಿವಾಲಯ ಕಾರ್ಮಿಕ ಸಚಿವಾಲಯಕ್ಕೆ ಹೇಳಿತ್ತು.
2016-17ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನೀಡಲಾಗುವುದು. ಕೇಂದ್ರ ಟ್ರಸ್ಟಿ ಮಂಡಳಿ ಶೇಕಡಾ 8.65ರಷ್ಟು ನೀಡಲು ನಿರ್ಧರಿಸಿದೆ. ನಮ್ಮ ಸಚಿವಾಲಯ ಹಣಕಾಸು ಸಚಿವಾಲಯ ಜೊತೆ ಮಾತುಕತೆ ನಡೆಸುತ್ತಿದೆ. ನಮ್ಮಲ್ಲಿ 158 ಕೋಟಿ ರೂಪಾಯಿ ಹೆಚ್ಚುವರಿ ಹಣವಿದೆ. ಅಗತ್ಯಬಿದ್ದರೆ ಹಣಕಾಸು ಸಚಿವಾಲಯ ಜೊತೆ ಮಾತುಕತೆ ನಡೆಸುತ್ತೇನೆ. ಹೆಚ್ಚುವರಿ ಉಳಿತಾಯವನ್ನು ನೌಕರರಿಗೆ ನೀಡಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.
ಕಳೆದ ವರ್ಷ ಹಣಕಾಸು ಇಲಾಖೆ ಕಾರ್ಮಿಕರ ಭವಿಷ್ಯ ನಿಧಿಗೆ ಶೇಕಡಾ 8.8 ಬಡ್ಡಿದರ ನೀಡಿತ್ತು.
SCROLL FOR NEXT