ಮುಂಬೈ: ಜಾಗತಿಕ ಸೂಚ್ಯಂಕ ಕುಸಿದಿರುವ ಹಿನ್ನೆಲೆಯಲ್ಲಿ ಬುಲಿಯನ್ (ಚಿನ್ನದ) ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಕುಸಿದಿದ್ದು, 10 ಗ್ರಾಂ ಗೆ 235 ರೂಪಾಯಿ ಇಳಿಕೆಯಾಗಿದೆ.
ಚಿನ್ನದೊಂದಿಗೆ ಬೆಳ್ಳಿಯ ದರ ಸಹ ಇಳಿಕೆಯಾಗಿದ್ದು ಕಳೆದ ವಾರ 29,345 ರೂಪಾಯಿಯಷ್ಟಿದ್ದ ಸ್ಟ್ಯಾಂಡರ್ಡ್ ಚಿನ್ನ (99.5 ಶುದ್ಧತೆ)ಯ ಚಿನ್ನದ ದರ ಈಗ 10 ಗ್ರಾಮ್ ಗಳಿಗೆ 29,110 ರಷ್ಟಾಗಿದೆ.
ಕಳೆದ ವಾರ 29,495 ರೂಪಾಯಿಯಷ್ಟಿದ್ದ ಶುದ್ಧ ಚಿನ್ನ (99.9)ದ ದರ 10 ಗ್ರಾಂ.ಗೆ ರೂ.29,260 ರಷ್ಟಾಗಿದೆ. ಬೆಳ್ಳಿ ದರ ಪ್ರತಿ ಕೆ.ಜಿಗೆ 480 ರೂಪಾಯಿ ಇಳಿಕೆಯಾಗಿದ್ದು, 42,025 ದಿಂದ 41,545 ರೂಗಳಿಗೆ ಇಳಿಕೆಯಾಗಿದೆ.
ಸ್ಪಾಟ್ ಚಿನ್ನ ದರ ಶೇ.1 ರಷ್ಟು ಕಡಿಮೆಯಾಗಿದ್ದರೆ, ಬೆಳ್ಳಿಯ ದರ ಶೇ.0.6 ರಷ್ಟು ಇಳಿಕೆಯಾಗಿದೆ.