ವಾಣಿಜ್ಯ

ಜಿಎಸ್ ಟಿಯಿಂದ ಭಾರತದ ಆರ್ಥಿಕಾಭಿವೃದ್ಧಿ ಶೇಕಡಾ 8ಕ್ಕೆ ಏರಿಕೆ: ಐಎಂಎಫ್

Sumana Upadhyaya
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ ಜುಲೈ 1ರಿಂದ ಜಾರಿಗೆ ಬರಲಿದೆ. ಭಾರತದ ಮಧ್ಯಮ-ಅವಧಿಯ ಬೆಳವಣಿಗೆಗೆ ಇದು ಸಹಕಾರಿಯಾಗಲಿದ್ದು ಶೇಕಡಾ 8ಕ್ಕಿಂತ ಹೆಚ್ಚಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. 
ದೇಶದ ಆರ್ಥಿಕ ಸುಧಾರಣೆಗೆಯಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ಗಟ್ಟಿಯಾದ ಸ್ಥಿರ ಅಭಿವೃದ್ಧಿ ಮುಂದುವರಿಯಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕ ಟಾವ್ ಝಂಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಭಾರತದ ಮಧ್ಯಮ ಅವಧಿಯ ಆರ್ಥಿಕ ಬೆಳವಣಿಗೆ ಶೇಕಡಾ 8ರಷ್ಟಾಗಲಿದೆ. ಇದರಿಂದ ಉತ್ಪಾದನೆ ವಿಸ್ತರಣೆಯಾಗುವುದಲ್ಲದೆ ರಾಜ್ಯಗಳ ನಡುವೆ ಸರಕು ಮತ್ತು ಸೇವೆಗಳ ಹರಿವು ಕೂಡ ಹೆಚ್ಚಾಗಲಿದೆ ಎಂದು ಐಎಂಎಫ್ ಹೇಳಿದೆ.
 ಭಾರತ  ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು 2016-17ರ ಹಣಕಾಸು ವರ್ಷದಲ್ಲಿ ಶೇಕಡಾ 6.8 ಮತ್ತು 2017-18ರಲ್ಲಿ ಶೇಕಡಾ 7.2ರಷ್ಟು ಪ್ರಗತಿಯುಂಟಾಗಿದೆ ಎಂದು ಐಎಂಎಫ್ ಹೇಳಿದೆ.
SCROLL FOR NEXT