ವಾಣಿಜ್ಯ

ಆರ್‌ಬಿಐನಿಂದ ರೆಪೊ ದರ ಕಡಿತ, ಗೃಹ, ಕಾರು ಸಾಲದ ಮೇಲಿನ ಬಡ್ಡಿ ದರ ಇಳಿಕೆ ಸಾಧ್ಯತೆ

Lingaraj Badiger
ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್ ಬಿಐ) ಬುಧವಾರ ರೆಪೊ ದರಗಳನ್ನು ಕಡಿತಗೊಳಿಸಿ ಅಚ್ಚರಿ ಮೂಡಿಸಿದ್ದು, ರೆಪೊ ದರದಲ್ಲಿ 25 ಮೂಲಾಂಶ ಇಳಿಕೆ ಮಾಡಿದೆ. ಇದರೊಂದಿಗೆ ರೆಪೊ ದರ ಶೇ. 6ಕ್ಕೆ ಇಳಿಕೆಯಾಗಿದೆ. ಇದು ಕಳೆದ ಏಳು ವರ್ಷಗಳಲ್ಲೇ ಕನಿಷ್ಠ ರೆಪೊ ದರವಾಗಿದೆ.
ಬ್ಯಾಂಕುಗಳು ತೆಗೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರ(ರೆಪೊ ದರ)ವನ್ನು ಆರ್ ಬಿಐ ಕಡಿಮೆ ಮಾಡಿರುವುದರಿಂದ ಬ್ಯಾಂಕ್‌ ಗಳು ಸಹ ಗೃಹ, ಕಾರು ಸಾಲದ ಮೇಲಿನ ಬಡ್ಡಿ ದರವನ್ನು ಕಡಿತ ಮಾಡುವ ಸಾಧ್ಯತೆ ಇದೆ.
ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಧ್ಯಮ ಅವಧಿಗೆ ಶೇ. 4ರಷ್ಟು ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ಗುರಿ ಸಾಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
2016ರ ಅಕ್ಟೋಬರ್‌ ನಂತರ ಆರ್ ಬಿಐ ರೆಪೊ ದರ ಇಳಿಕೆ ಮಾಡಿರುವುದು ಇದೇ ಮೊದಲು ಮತ್ತು 2010, ನವೆಂಬರ್ ನಂತರ ಇದು ಅತ್ಯಂತ ಕಡಿಮೆ ರೆಪೊ ದರವಾಗಿದೆ.
ಇದರೊಂದಿಗೆ ರಿವರ್ಸ್ ರೆಪೊ(ವಾಣಿಜ್ಯ ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಪಡೆಯುವ ಸಾಲದ ಬಡ್ಡಿ)ದರವನ್ನು 25 ಮೂಲಾಂಶ ಕಡಿತಗೊಳಿಸಿದ್ದು, ಶೇ.6ರಷ್ಟಿದ್ದ ರಿವರ್ಸ್ ರೆಪೊ ದರ ಈಗ ಶೇ.5.75ಕ್ಕೆ ಇಳಿಸಲಾಗಿದೆ.
SCROLL FOR NEXT