ವಾಣಿಜ್ಯ

11.44 ಲಕ್ಷಕ್ಕೂ ಅಧಿಕ ಪ್ಯಾನ್ ಸಂಖ್ಯೆ ನಿಷ್ಕ್ರಿಯ: ಕಿರಿಯ ಸಚಿವ ಸಂತೋಷ್ ಕುಮಾರ್ ಗಂಗಾವರ್

Sumana Upadhyaya
ನವದೆಹಲಿ: ಒಬ್ಬ ವ್ಯಕ್ತಿಗೆ ಅಧಿಕ ಪ್ಯಾನ್ ಸಂಖ್ಯೆಗಳನ್ನು  ನೀಡಿದ್ದು ಕಂಡುಬಂದ 11.44 ಲಕ್ಷಕ್ಕೂ ಅಧಿಕ ಪ್ಯಾನ್ ಕಾರ್ಡುಗಳಲ್ಲಿ ಕೆಲವನ್ನು ಅಳಿಸಲಾಗಿದ್ದು, ಇನ್ನು ಕೆಲವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗಾವರ್ ಮಾಹಿತಿ ನೀಡಿದರು.
ನಿನ್ನೆ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ಅವರು, ಜುಲೈ 27ಕ್ಕೆ ಇಂತಹ 11,44,211 ಪ್ಯಾಸ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಇಲ್ಲವೇ ಅಳಿಸಿಹಾಕಲಾಕಲಾಗಿದೆ ಎಂದರು. ಓರ್ವ ವ್ಯಕ್ತಿ ಹಲವು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ತೆರಿಗೆ ಪಾವತಿದಾರರಿಗೆ ಮತ್ತು ಒಬ್ಬ ವ್ಯಕ್ತಿ ಕೈಗೊಂಡ ಎಲ್ಲಾ ಹಣಕಾಸಿನ ವಹಿವಾಟುಗಳ ಅಧಿಕೃತತೆಗೆ ಪ್ಯಾನ್ ಸಂಖ್ಯೆ ಪ್ರಮುಖ ಗುರುತಾಗಿರುತ್ತದೆ.ಒಬ್ಬ ವ್ಯಕ್ತಿಗೆ ಒಂದು ಪ್ಯಾನ್ ಸಂಖ್ಯೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಮಾರ್ಗಸೂಚಿ ಪ್ರಕಾರ ಇರಬೇಕು. ಆದರೆ ಜುಲೈ 27ಕ್ಕೆ 1,566 ಪ್ಯಾನ್ ಸಂಖ್ಯೆಗಳು ನಕಲಿ ಎಂದು ಕೂಡ ಗುರುತಿಸಲಾಗಿದೆ ಎಂದರು. ನಕಲಿ ಪ್ಯಾನ್ ಗಳು ಇಲ್ಲದೇ ಇರುವ ವ್ಯಕ್ತಿಗೆ ಹಾಗೂ ಇನ್ನು ಕೆಲವು ನಕಲಿ ಗುರುತಿನ ಮೂಲಕ ವ್ಯಕ್ತಿಗೆ ನೀಡಿರುವಂತಹದ್ದು ಎಂದು ವಿವರಿಸಿದರು.
ಹಳೆಯ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ನಂತರ ಅಘೋಷಿತ ಆದಾಯಗಳ ವಶಪಡಿಸಿಕೊಳ್ಳುವಿಕೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಗಂಗಾವರ್, ನವೆಂಬರ್ 2016ರಿಂದ ಮಾರ್ಚ್ 2017ರವರೆಗೆ ಆದಾಯ ತೆರಿಗೆ ಇಲಾಖೆ ಜನರ 900 ಗುಂಪುಗಳ ಮೇಲೆ ಶೋಧ ಕಾರ್ಯ ನಡೆಸಿದ್ದು 900 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. 7,961 ಕೋಟಿ ರೂಪಾಯಿ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಹೇಳಿದರು.
SCROLL FOR NEXT