ಸಂಗ್ರಹ ಚಿತ್ರ 
ವಾಣಿಜ್ಯ

ಕಾಲ್ ಡ್ರಾಪ್ ವಿರುದ್ಧ ಟ್ರಾಯ್ ಕೆಂಗಣ್ಣು: ಕರೆ ಕಡಿತದ ದಂಡ ರು. 10 ಲಕ್ಷಕ್ಕೆ ಏರಿಕೆ!

ಕರೆ ಕಡಿತದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ಗರಿಷ್ಠ ದಂಡವನ್ನು ರು.50 ಸಾವಿರದಿಂದ ರು10 ಲಕ್ಷಕ್ಕೆ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಕರೆ ಕಡಿತದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ಗರಿಷ್ಠ ದಂಡವನ್ನು ರು.50 ಸಾವಿರದಿಂದ ರು10 ಲಕ್ಷಕ್ಕೆ  ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಹಕರು ಕರೆ ಮಾಡಿದ್ದ ಸಂದರ್ಭದಲ್ಲಿ ಕರೆ ಕಡಿತವಾದರೆ ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ದಂಡ ಪ್ರಮಾಣವನ್ನು ಟ್ರಾಯ್ ಭಾರಿ ಮಟ್ಟದಲ್ಲಿ ಏರಿಕೆ ಮಾಡಿದೆ. ಈಗಾಗಲೇ ಕರೆ ಕಡಿತ ಸಮಸ್ಯೆ  ನಿವಾರಣೆಗೆ 9 ತಿಂಗಳ ಗಡುವು ನೀಡಿರುವ ಟ್ರಾಯ್‌, ಒಂದು ವೇಳೆ ಸತತ 3 ತ್ರೈಮಾಸಿಕದಲ್ಲಿ (9 ತಿಂಗಳು) ಸಮಸ್ಯೆ ನಿವಾರಿಸಿಕೊಳ್ಳದಿದ್ದರೆ, ಗರಿಷ್ಠ ರು.10 ಲಕ್ಷದವರೆಗೂ ದಂಡ ವಿಧಿಸುವುದಾಗಿ ಟೆಲಿಕಾಂ ಸಂಸ್ಥೆಗಳಿಗೆ ಎಚ್ಚರಿಕೆ  ನೀಡಿದೆ.

ಈ ಹಿಂದಿನ ಗುಣಮಟ್ಟ ಸೇವಾ ನಿಯಮಾವಳಿಗಳ ಅನ್ವಯ ಪ್ರತಿ ಬಾರಿ ನಿಯಮ ಉಲ್ಲಂಘನೆಗೆ ರು.50,000 ದಂಡ ವಿಧಿಸಲಾಗುತ್ತಿತ್ತು. ಅದನ್ನು ಈಗ ರು.1 ಲಕ್ಷದಿಂದ ರು.10 ಲಕ್ಷ ರುಗಳವರೆಗೆ ಹೆಚ್ಚಿಸಲಾಗಿದೆ ಎಂದು  ತಿಳಿದುಬಂದಿದೆ. ಕರೆ ಕಡಿತದ ಪ್ರಮಾಣದ ಮೇಲೆ ದಂಡದ ಮೊತ್ತ ನಿರ್ಧಾರವಾಗುತ್ತದೆ. ಈ ಹಿಂದೆ ವಲಯ ಮಟ್ಟದಲ್ಲಿ ಈ ದಂಡವನ್ನು ನಿರ್ಧರಿಸಲಾಗುತ್ತಿತ್ತು. ಇನ್ನು ಮುಂದೆ ಅದನ್ನು ದೂರವಾಣಿ ಗೋಪುರದ ಮಟ್ಟ (ಟವರ್  ಲೊಕೇಷನ್)ದಲ್ಲಿ ನಿರ್ಧರಿಸಲಾಗುತ್ತದೆ ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್‌. ಶರ್ಮಾ ತಿಳಿಸಿದ್ದಾರೆ.

ಇನ್ನು ಪ್ರಸ್ತುತ ಕಾಲ್ ಡ್ರಾಪ್ ಸಮಸ್ಯೆ ನಿಯಂತ್ರಿಸಲು ‘ಟ್ರಾಯ್‌’ ಶುಕ್ರವಾರ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಅತ್ಯಂತ ಕಠಿಣವಾಗಿದ್ದು, ದೂರಸಂಪರ್ಕ ಸಂಸ್ಥೆಗಳಿಗೆ ಅಂಕುಶ ಹಾಕಲಿವೆ ಎಂದು ತಜ್ಞರು  ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT