ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ರಿಲಾಯನ್ಸ್ ಎನರ್ಜಿಯಿಂದ ವಾಟ್ಸ್ ಆಪ್ ನಂಬರ್ ಬಿಡುಗಡೆ
ಮುಂಬೈ: ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ರಿಲಾಯನ್ಸ್ ಎನರ್ಜಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಗ್ರಾಹಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ವಾಟ್ಸ್ ಆಪ್ ನಂಬರ್ ನ್ನು ನೀಡಿದೆ.
ಒಂದು ವೇಳೆ ಇಂಧನ(ಎನರ್ಜಿ) ಪೂರೈಕೆ ಸ್ಥಗೊತಗೊಂಡರೆ ರಿಲಾಯನ್ಸ್ ನೀಡಿರುವ ವಾಟ್ಸ್ ಆಪ್ ನಂಬರ್ ಗೆ ನೋ ಸಪ್ಲೈ ಎಂದು ಮೆಸೇಜ್ ಕಳಿಸಬಹುದಾಗಿದೆ. ತಕ್ಷಣವೇ ರಿಲಾಯನ್ಸ್ ಸಂಸ್ಥೆಯ ಸಿಬ್ಬಂದಿಗಳು ಗ್ರಾಹಕರ ಸಮಸ್ಯೆಗೆ ಸ್ಪಂದಿಸಲಿದ್ದು, ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ರಿಲಾಯನ್ಸ್ ಸಂಸ್ಥೆ ಹೇಳಿದೆ.
ಮೆಸೇಜ್ ಕಳಿಸುವುದರೊಂದಿಗೆ 9022813030 ನಂಬರ್ ಗೆ ವಾಟ್ಸ್ ಆಪ್ ಮೆಸೇಜ್ ಮಾಡುವ ಮೂಲಕ ತಮ್ಮ ದೂರಿನ ಸ್ಥಿತಿಯ ಬಗ್ಗೆಯೂ ಗ್ರಾಹಕರು ಮಾಹಿತಿ ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಸಂವಹನ ಮಾಧ್ಯಮವಾಗಿ ವ್ಯಾಪಕ ಬಳಕೆಯಲ್ಲಿರುವ ಹಿನ್ನೆಲೆಯಲ್ಲಿ ರಿಲಾಯನ್ಸ್ ಸಂಸ್ಥೆ ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಆಧುನಿಕ ತಂತ್ರಜ್ಞಾನ ಅನುಸರಿಸಲು ಮುಂದಾಗಿದೆ.