ಕೈ ಸುಡುವ ಎಲ್ ಪಿಜಿ: ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 7 ರೂ. ಹೆಚ್ಚಳ
ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯನ್ನು ಇಂದು ಪ್ರತಿ ಸಿಲಿಂಡರ್ಗೆ 7 ರೂಪಾಯಿಗಳಷ್ಟು ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಹೊಸದಿಲ್ಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯನ್ನು ಇಂದು ಪ್ರತಿ ಸಿಲಿಂಡರ್ಗೆ 7 ರೂಪಾಯಿಗಳಷ್ಟು ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ತಿಂಗಳು ಬೆಲೆ ಹೆಚ್ಚಿಸುವ ತನ್ನ ನಿರ್ಧಾರಕ್ಕೆ ಅನುಗುಣವಾಗಿ ಈ ಹಣಕಾಸು ವರ್ಷದ ಕೊನೆಯಲ್ಲಿ ಎಲ್ಲಾ ಎಲ್ಪಿಜಿ ಸಬ್ಸಿಡಿಗಳನ್ನು ತೆಗೆದುಹಾಕಲಾಗುತ್ತದೆ.
ದೆಹಲಿಯಲ್ಲಿ ಸಬ್ಸಿಡಿ ಸಹಿತವಾದ 14.2 ಕೆಜಿ ಎಲ್ಪಿಜಿ ಸಿಲೆಂದರ್ ಬೆಲೆ ಏರಿಕೆಯ ಬಳಿಕ 487.18 ರೂ. ಆಗಿದ್ದು ಈ ಹಿಂದೆ 479.77 ರೂ.ಇತ್ತು.
ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 31 ರಂದು ಲೋಕಸಭೆಯಲ್ಲಿ ಹೇಳಿರುವಂತೆ, ಸಬ್ಸಿಡಿ ಸಹಿತವಾದ ಅಡುಗೆ ಅನಿಲಕ್ಕೆ (ಎಲ್ಪಿಜಿ) ಪ್ರತಿ ತಿಂಗಳು 4 ರೂ. ಹೆಚ್ಚಿಸುವ ಮೂಲಕ ಮುಂದಿನ ವರ್ಷ ಮಾರ್ಚ್ ವೇಳೆಗೆ ಎಲ್ಪಿಜಿ ಸಬ್ಸಿಡಿ ಯನ್ನು ಸಂಪೂರ್ನವಾಗಿ ತೊಡೆದುಹಾಕಲು ಸರ್ಕಾರವು ದೇಶದ ತೈಲ ಸಂಸ್ಥೆಗಳಿಗೆ ಆದೇಶಿಸಿದೆ.
ಆದಾಗ್ಯೂ, ಆಗಸ್ಟ್ 1 ರಂದು ಸಿಲಿಂಡರ್ ಗೆ 2.31 ರೂ. ಹೆಚ್ಚಳವಾಗಿದ್ದು, ತೈಲ ಕಂಪೆನಿಗಳು ಈ ಮೊತ್ತವನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಜುಲೈನಿಂದ ಜಾರಿಗೆ ಬಂದ ಮಾಸಿಕ 2 ರೂ. ದರ ಹೆಚ್ಚಳದ ಪರಿನಾಮ, ಸಬ್ಸಿಡಿ ಸಹಿತ ಎಲ್ಪಿಜಿ ದರವು ಪ್ರತಿ ಸಿಲೆಂಡರ್ ಗೆ 68 ರೂ.ಅಷ್ಟು ಹೆಚ್ಚಾಗಿದೆ. 2016 ರ ಜೂನ್ ನಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 419.18 ರೂ.ಇತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.