ವಾಣಿಜ್ಯ

ಮುಂದಿನ ಫೆ.1 ಕ್ಕೆ ಭಾರತದ ಮೊದಲ ಜಿಎಸ್ ಟಿ ಬಜೆಟ್ ?

Raghavendra Adiga
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಿನ ವರ್ಷದ ಫೆಬ್ರವರಿ 1 ರಂದು ಜಿ ಎಸ್ ಟಿ ಜಾರಿಯ ನಂತರದಲ್ಲಿ ಭಾರತದ ಮೊದಲ ಬಜೆಟ್ ಮತ್ತು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸುವ ಸಾದ್ಯತೆ ಇದೆ. 
ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 30 ರಂದು ಪ್ರಾರಂಭವಾಗಲಿದೆ. ರಾಷ್ಟ್ರಪತಿ ರಾಮ್ ನಾಥ್  ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಮಾತನಾಡಲಿದ್ದಾರೆ.ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿಯನ್ನು ವಿವರಿಸುವ ಆರ್ಥಿಕ ಸಮೀಕ್ಷೆ ಜನವರಿ 31 ರಂದು ಮಂಡನೆಯಾಗಲಿದೆ, ಇದರ ಮರು ದಿನ ಕೇಂದ್ರ ಬಜೆಟ್ ಮಂಡನೆಯಾಗುವ ಸಾದ್ಯತೆ ಇದೆ ಎಂದು ಅವರು ಹೇಳಿದರು.
ಫೆಬ್ರವರಿ ಅಂತ್ಯದ ವೇಳೆಗೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುರಿದು, ಜೇಟ್ಲಿ ಮೊದಲ ಬಾರಿಗೆ ಈ ವರ್ಷದ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಿದ್ದರು. ಏಪ್ರಿಲ್ 1 ರಿಂದ ಪ್ರಾರಂಭವಾಗುವ ನೂತನ ಹಣಕಾಸು ವರ್ಷಕ್ಕಾಗಿನ ಪ್ರಸ್ತಾವನೆಯನ್ನು ಜಾರಿಗೆ ತರಲುಒಂದು ತಿಂಗಳು ಮುಂಚಿತವಾಗಿ  ಬಜೆಟ್ ಮಂಡಿಸುವುದು ಅನುಕೂಲಕರ ಕ್ರಮವಾಗಿದೆ ಎಂದು ವಿಶ್ಲೇಷಿಸಲಾಗಿದೆ.
SCROLL FOR NEXT