ನವದೆಹಲಿ: ಭಾರತದ ಪ್ರಖ್ಯಾತ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಾಖಲೆಯ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 2.25 ಬಿಲಯನ್ ಅಮೆರಿಕನ್ ಡಾಲರ್ ಮೌಲ್ಯದ ಹೊರಗುತ್ತಿಗೆ ಒಪ್ಪಂದ ಟಿಸಿಎಸ್ ಮತ್ತು ನೀಲ್ಸನ್ ನಡುವೆ ನಡೆದಿದೆ.
ನೂತನ ಒಪ್ಪಂದಕ್ಕೆ ಮುನ್ನ ಟಿಸಿಎಸ್, ಇನ್ನೂ ಎರಡು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿತ್ತು. ಅವು ಕ್ರಮವಾಗಿ 2008 ಹಾಗು 2013 ರಲ್ಲಿ ನದೆದಿತ್ತು. ಆ ಒಪ್ಪಂದಗಳ ಮೌಲ್ಯ ಸಹ ಬೃಹತ್ ಪ್ರಮಾಣದ್ದಾಗಿದ್ದು ಈ ಒಪ್ಪಂದ ಡಿ.31, 2025ರ ತನಕ ಚಾಲ್ತಿಯಲ್ಲಿರಲಿದೆ.
ಯುಕೆ ಮೂಲದ ಟಿವಿ ರೇಟಿಂಗ್ ಅಳತೆ ಮಾಡುವ ಸಂಸ್ಥೆ ನೀಲ್ಸನ್ ಜತೆಗಿನ ಒಪ್ಪಂದದ ಪರಿಣಾಮ ಮುಂಬರುವ ವರ್ಷದಲ್ಲಿ ಟಿಸಿಎಸ್ ವಹಿವಾಟು 320 ಮಿಲಿಯನ್ ಡಾಲರ್ ಗೆ ತಲುಪುವ ನಿರೀಕ್ಷೆ ಇದೆ.