ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)
ನವದೆಹಲಿ: ಗ್ರಾಹಕರೇ ಗಮನಿಸಿ, ಇದೇ ಡಿ.31ರ ನಂತರದಲ್ಲಿ ಕೆಲ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದೆ..
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕ್ ಗಳಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಭಾರತೀಯ ಜನತಾ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ಮುಂದಿನ ಅವರ್ಷದ ಪ್ರಾರಂಬದಿಂದ ಅಮಾನ್ಯವಾಗಲಿದೆ.ಎಂದು ಮಾದ್ಯಮದಲ್ಲಿ ವರದಿಯಾಗಿದೆ.
ಈ ಬ್ಯಾಂಕ್ ನ ಗ್ರಾಹಕರು ಐಎಫ್ಎಸ್ ಕೋಡ್ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ) ಜೊತೆಗೆ ಹೊಸ ಚೆಕ್ ಪುಸ್ತಕಗಳನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಬೇಕು. ಈ ಎಲ್ಲಾ ಬ್ಯಾಂಕ್ ಗಳು ಎಸ್ ಬಿಐನಲ್ಲಿ ವಿಲೀನಗೊಂಡ ಪರಿಣಾಮ ಬ್ಯಾಂಕ್ ಸೆ.30ರ ನಂತರ ಹಳೆಯ ಚೆಕ್ ಪುಸ್ತಕಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿತ್ತು. ಆದರೆ ಗ್ರಾಹಕರ ಅನುಕೂಲದ ದೃಷ್ಟಿಯಿಂದ ನೂತನ ಚೆಕ್ ಪುಸ್ತಕ ಪಡೆಯಲು ಡಿ. 31ರವರೆಗೆ ಗಡುವು ವಿಸ್ತರಿಸಬೇಕೆಂದು ಆರ್ ಬಿಐ ಸೂಚನೆ ನೀಡಿತ್ತು. ಇದರಂತೆ ಬ್ಯಾಂಕ್ ಡಿ.31ರವರೆಗೆ ಹೊಸ ಚೆಕ್ ಪುಸ್ತಕ ಪಡೆಯುವ ಅವಧಿಯನ್ನು ವಿಸ್ತರಿಸಿದೆ.
ಹೊಸ ಚೆಕ್ ಪುಸ್ತಕಗಳನ್ನು ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಪಡೆದುಕೊಳ್ಳಬಹುದು ,ಹಾಗೆಯೇ ಮೊಬೈಲ್ ಹಾಗೂ ಎಟಿಎಂ ಮುಖೇನವೂ ಚೆಕ್ ಪುಸ್ತಕಕ್ಕೆ ಅರ್ಜಿ ಸಲ್ಲಿಸಬಹುದೆಂದು ಬ್ಯಾಂಕ್ ಮೂಲಗಳು ತಿಳಿಸಿದೆ.