ವಾಣಿಜ್ಯ

ಯುನೈಟೆಡ್ ಬ್ರಿವರೀಸ್ ಮಂಡಳಿಯಿಂದ ವಿಜಯ್ ಮಲ್ಯ ವಜಾ

Sumana Upadhyaya
ನವದೆಹಲಿ:ಮದ್ಯ ದೊರೆ ವಿಜಯ್ ಮಲ್ಯ ಅವರನ್ನು  ಯುನೈಟೆಡ್ ಬ್ರಿವರೀಸ್ ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದೆ.
ಸೆಕ್ಯುರಿಟೀಸ್ ಅಂಡ್ ಎಕ್ಸಚೇಂಜ್ ಆಫ್ ಇಂಡಿಯಾದ ಪಟ್ಟಿಯ ಕಂಪೆನಿಗಳಲ್ಲಿ ಪ್ರಮುಖ ನಿರ್ವಹಣಾ ಪಾತ್ರಗಳನ್ನು ಹೊಂದುವುದರಿಂದ ಮಲ್ಯ ಅವರನ್ನು ತಡೆಹಿಡಿಯಲಾಗುತ್ತದೆ ಎಂದು ಯುಬಿ ಗ್ರೂಪ್ ತಿಳಿಸಿದೆ.
ಕಿಂಗ್ ಫಿಶರ್ ಮದ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿದ್ದ ಮಲ್ಯ ಅವರು ತಮ್ಮ ಜೀವನಶೈಲಿಯಿಂದ ಗುರುತಿಸಿಕೊಂಡಿದ್ದು ತಮ್ಮನ್ನು ತಾವು ಕಿಂಗ್ ಆಫ್ ಗುಡ್ ಟೈಮ್ಸ್ ಎಂದು ಕರೆದುಕೊಳ್ಳುತ್ತಿದ್ದರು.
ಸಾಲವನ್ನು ಹಿಂತಿರುಗಿಸುವಂತೆ ಬ್ಯಾಂಕುಗಳು ನೀಡುತ್ತಿರುವ ಒತ್ತಡ ತಾಳಲಾರದೆ ಕಳೆದ ಮಾರ್ಚ್ ನಲ್ಲಿ ಇಂಗ್ಲೆಂಡಿಗೆ ಹೋಗಿ ನೆಲೆಸಿದ್ದಾರೆ. 
ಸ್ಟೇಟ್ ಬ್ಯಾಂಕಿನಿಂದ ಪಡೆದ ಸಾಲವನ್ನು ದುರುಪಯೋಗಪಡಿಸಿಕೊಂಡ ಶಂಕೆಯಿಂದ ಜಾರಿ ನಿರ್ದೇಶನಾಲಯ ಹಲವು ಬಾರಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದರೂ ಕೂಡ ಮಲ್ಯ ಪದೇ ಪದೇ ವಿಫಲವಾಗುತ್ತಿದ್ದರು.
SCROLL FOR NEXT