ನವದೆಹಲಿ: ನೋಟುಗಳ ಅಮಾನ್ಯತೆ ನಂತರ ನಗದು ಠೇವಣಿ ಇರಿಸಿದ ಜನರಿಗೆ ಆನ್ ಲೈನ್ ಮೂಲಕ ಪ್ರತಿಕ್ರಿಯೆ, ಸಂದೇಹಗಳನ್ನು ನೀಡಲು ಅವಧಿಯನ್ನು ಫೆಬ್ರವರಿ 15ರವರೆಗೆ ಮುಂದೂಡಲಾಗಿದೆ ಎಂದು #Operation Clean Money ಎಂಬ ಆದಾಯ ತೆರಿಗೆ ಇಲಾಖೆಯ ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.
ಜನವರಿ 31ರಂದು ತೆರಿಗೆ ಇಲಾಖೆ ''Operation Clean Money'' ಎಂಬ ಪುಟವನ್ನು ಆರಂಭಿಸಿದ್ದು ಅದರಡಿ ನೋಟು ಅಮಾನ್ಯತೆ ನಂತರ 5 ಲಕ್ಷಕ್ಕಿಂತಲೂ ಹೆಚ್ಚು ಹಣ ಠೇವಣಿಯಿರಿಸಿದ 18 ಲಕ್ಷ ಸಂಶಯಾಸ್ಪದ ಜನರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಉತ್ತರಿಸುವಂತೆ ತಿಳಿಸಲಾಗಿತ್ತು. ಇ-ಮೇಲ್ ಅಥವಾ ಎಸ್ಎಂಎಸ್ ಸಿಕ್ಕಿದ 10 ದಿನಗಳೊಳಗೆ ಐಟಿ ಇಲಾಖೆ ಪೋರ್ಟಲ್ ನಲ್ಲಿ ಉತ್ತರಿಸುವಂತೆ ಸೂಚಿಸಲಾಗಿತ್ತು.
500 ಮತ್ತು 1000ದ ಹಳೆಯ ನೋಟುಗಳನ್ನು ನವೆಂಬರ್ 8ರಂದು ಚಲಾವಣೆ ರದ್ದುಗೊಳಿಸಿದ ನಂತರ ನೋಟುಗಳಿರುವವರು ಡಿಸೆಂಬರ್ 30ರೊಳಗೆ ಬ್ಯಾಂಕಿನಲ್ಲಿ ಠೇವಣಿಯಿಡುವಂತೆ ಕೇಂದ್ರ ಸರ್ಕಾರ ತಿಳಿಸಿತ್ತು. ಆ ನಂತರ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕಿನಲ್ಲಿ ಹಣ ಠೇವಣಿಯಾದ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. 2 ಲಕ್ಷದಿಂದ 80 ಲಕ್ಷದವರೆಗೆ ಮತ್ತು 80 ಲಕ್ಷದಿಂದ ಹೆಚ್ಚು ಹಣವನ್ನು ಠೇವಣಿಯಿರಿಸಿದ್ದನ್ನು ಪ್ರತ್ಯೇಕಗೊಳಿಸಿತ್ತು. ಠೇವಣಿಯಿಟ್ಟ ಹಣ ಮತ್ತು ಠೇವಣಿದಾರರ ಪರಿಚಯವನ್ನು ಹೊಂದಿಕೆ ಮಾಡಿ ಹೊಂದಾಣಿಕೆಯಾಗದವರಿಗೆ ಆದಾಯ ತೆರಿಗೆ ಇಲಾಖೆ, ಯಾವ ಮೂಲದಿಂದ ಹಣ ಬಂದಿದೆ ಎಂದು ತೋರಿಸುವಂತೆ ಎಸ್ಎಂಎಸ್ ಮತ್ತು ಇ-ಮೇಲ್ ಕಳುಹಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos