ಎಫ್ ಡಿಐ 
ವಾಣಿಜ್ಯ

12,000 ಕೋಟಿ ರೂ ಮೊತ್ತದ 15 ಎಫ್ ಡಿಐ ಪ್ರಸ್ತಾವನೆಗಳಿಗೆ ಒಪ್ಪಿಗೆ

ಮುಖ್ಯ ಆರ್ಥಿಕ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ನೇತೃತ್ವದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‍ಐಪಿಬಿ) 12,000 ಕೋಟಿ ರೂ ಮೊತ್ತದ 15 ಎಫ್ ಡಿಐ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದೆ.

ನವದೆಹಲಿ: ಮುಖ್ಯ ಆರ್ಥಿಕ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ನೇತೃತ್ವದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‍ಐಪಿಬಿ) 12,000 ಕೋಟಿ ರೂ ಮೊತ್ತದ 15 ಎಫ್ ಡಿಐ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದೆ. 
ಒಟ್ಟು 24 ಎಫ್ ಡಿಐ ಪ್ರಸ್ತಾವನೆಗಳ ಪೈಕಿ 15 ಎಫ್ ಡಿಐ ಪ್ರಸ್ತಾವನೆಗಳಿಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ) ಒಪ್ಪಿಗೆ ನೀಡಿದೆ. ಅಪೋಲೋ ಹಾಸ್ಪಿಟಲ್ಸ್, ಹಿಂದೂಸ್ಥಾನ್ ಏರೋನಾಟಿಕ್ಸ್, ಡಾ. ರೆಡ್ಡೀಸ್ ಹಾಗೂ ವೊಡಾಫೋನ್ ಸಂಸ್ಥೆಗಳಲ್ಲಿ ಒಪ್ಪಿಗೆ ಸೂಚಿಸಲಾಗಿರುವ 15 ಪ್ರಸ್ತಾವನೆಗಳು ಬಂಡವಾಳ ಹೂಡಿಕೆ ಮಾಡಲಿವೆ. 
8,800 ಕೋಟಿಯಷ್ಟು ಬಂಡವಾಳ ಹೂಡಲಿದ್ದ ಗ್ಲಾಂಡ್ ಫಾರ್ಮಾದ ಪ್ರಸ್ತಾವನೆಯೂ ಸೇರಿ 6 ಪ್ರಸ್ತಾವನೆಗಳಿಗೆ ಎಫ್ಐಪಿಬಿ ಒಪ್ಪಿಗೆ ಸೂಚಿಸಿಲ್ಲ. ಅಪೋಲೋ ಆಸ್ಪತ್ರೆಗೆ 750 ಕೋಟಿ ರೂ, ಹಿಂದೂಸ್ಥಾನ್ ಏರೋನಾಟಿಕ್ಸ್ ಗೆ 170 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹರಿದುಬರಲಿದೆ. 
2017-18 ರ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಎಫ್ ಡಿಐ ವ್ಯವಸ್ಥೆಯನ್ನು ರದ್ದುಗೊಳಿಸಿ, ಉದ್ಯಮ ಸ್ಥಾಪನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಪ್ರಸ್ತುತ ಭಾರತದಲ್ಲಿ ಎಫ್ಐಪಿಬಿ ಏಕಗವಾಕ್ಷಿ ಪದ್ಧಯ ಮೂಲಕ ಎಫ್ ಡಿಐ ಅರ್ಜಿಗಳನ್ನು ಇತ್ಯರ್ಥಗೊಳಿಸುತ್ತದೆ. ಆಟೋಮಾಟಿಕ್ ರೂಟ್ ವ್ಯಾಪ್ತಿಯಲ್ಲಿ ಬರುವ ಹಲವು ಕ್ಷೇತ್ರಗಳಿಗೆ ಹೂಡಿಕೆ ಮಾಡಲು ಎಫ್‍ಐಪಿಬಿ ಒಪ್ಪಿಗೆ ಇಲ್ಲದೇ ನೇರವಾಗಿ ಬಂಡವಾಳ ಹೂಡಿಕೆ ಮಾಡಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!