2015-16 ರಲ್ಲಿ ಗುಜರಾತ್ ಐಟಿ ಕ್ಷೇತ್ರದಲ್ಲಿ 35,200 ಕೋಟಿ ಹೂಡಿಕೆ: ಅಸೋಚಾಮ್
2015-16 ನೇ ಸಾಲಿನಲ್ಲಿ ಗುಜರಾತ್ ಐಟಿ ಕ್ಷೇತ್ರಕ್ಕೆ 35,200 ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಅಹ್ಮದಾಬಾದ್: 2015-16 ನೇ ಸಾಲಿನಲ್ಲಿ ಗುಜರಾತ್ ಐಟಿ ಕ್ಷೇತ್ರಕ್ಕೆ 35,200 ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
2005-06 ರಲ್ಲಿ ಕೇವಲ 700 ಕೋಟಿ ರೂಗಳಷ್ಟಿದ್ದ ಹೂಡಿಕೆ ಮೊತ್ತ 10 ವರ್ಷಗಳಲ್ಲಿ 35,200 ಕೋಟಿಗೆ ತಲುಪಿದೆ ಎಂದು ಕೈಗಾರಿಕಾ ಮಂಡಳಿ ಅಸೋಚಾಮ್ ಹೇಳಿದೆ. ಅಸೋಚಾಮ್ ನ ಆರ್ಥಿಕ ಸಂಶೋಧನಾ ವಿಭಾಗ ಗುಜರಾತ್ ಐಟಿ ಕ್ಷೇತ್ರದ ಹೂಡಿಕೆ ಬಗ್ಗೆ ವಿಶ್ಲೇಷಣೆ ಮಾಡಿದ್ದು, 10 ವರ್ಷಗಳಲ್ಲಿ ಗುಜರಾತ್ ನ ಐಟಿ ಕ್ಷೇತ್ರದ ವಾರ್ಷಿಕ ಬೆಳವಣಿಗೆ ಶೇ.48 ರಷ್ಟಿತ್ತು ಎಂದು ಹೇಳಿದೆ.
ಇನ್ನು ಭಾರತದ ಐಟಿ ಕ್ಷೇತ್ರದ ಬೆಳವಣಿಗೆ ಶೇ.17 ರಷ್ಟಿದ್ದು ಹೂಡಿಕೆ ಮೊತ್ತ 46,280 ಕೋಟಿಯಿಂದ 2015-16 ರಲ್ಲಿ 2.2 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಅಸೋಚಾಮ್ ತಿಳಿಸಿದೆ. ಹೂಡಿಕೆ ಏರಿಕೆಗೆ ಪೂರಕವಾಗಿ ಮತ್ತಷ್ಟು ಉತ್ತಮ ವಾತಾವರವನ್ನು ಗುಜರಾತ್ ಸರ್ಕಾರ ಹೆಚ್ಚಿಸುವುದಕ್ಕಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಅಸೋಚಾಮ್ ಅಭಿಪ್ರಾಯಪಟ್ಟಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.