ವಾಣಿಜ್ಯ

ಭಾರತೀಯ ಸಣ್ಣ ಕಂಪನಿಗಳಿಗೆ ಗೂಗಲ್ ವತಿಯಿಂದ ಇಂಟರ್ನೆಟ್ ತರಬೇತಿ : ಸುಂದರ್ ಪಿಚ್ಚೈ

Shilpa D

ನವದೆಹಲಿ: ಭಾರತದಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಗೂಗಲ್ ಸಿಇಓ ಸುಂದರ್ ಪಿಚ್ಚೈ ಎರಡು ಯೋಜನೆಗಳನ್ನು ಘೋಷಿಸಿದ್ದಾರೆ.

ಭಾರತದ ಆರ್ಥಿಕತೆಗೆ ಸಣ್ಣ ಉದ್ದಿಮೆಗಳು ಬೆನ್ನೆಲುಬಾಗಿವೆ ಎಂಬುದನ್ನು ಮನಗಂಡಿರುವ ಸುಂದರ್ ಪಿಚ್ಚೈ, ಪ್ರತಿಯೊಬ್ಬರಿಗೂ ಇಂಟರ್ ನೆಟ್ ತಲುಪಬೇಕು ಎಂದು ಹೇಳಿದ್ದಾರೆ,

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಿಚ್ಚೈ, ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಒಕ್ಕೂಟದ ಮತ್ತು ಗೂಗಲ್ ಸಹಯೋಗದೊಂದಿಗೆ,ಡಿಜಿಟಲ್ ಅನ್ ಲಾಕಡ್ ಎಂಬ ತರಬೇತಿ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಹೈದರಾಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯಿಂದ ಈ ತರಬೇತಿ ಪಡೆದವರಿಗೆ ಪ್ರಮಾಣಪತ್ರ ನೀಡಲಾಗುವುದು. ಆನ್ ಲೈನ್ ಮತ್ತು ಮೊಬೈಲ್ ಕೋರ್ಸ್  ಗಳ ಮೂಲಕ ದೇಶಾದ್ಯಂತ ಇರುವ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ತರಬೇತಿ ಪಡೆದುಕೊಳ್ಳಬಹುದು.

ಮುಂದಿನ ಮೂರು ವರ್ಷದಲ್ಲಿ ದೇಶದ 40 ನಗರಗಳಲ್ಲಿ 5 ಸಾವಿರ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಮತ್ತೊಂದು ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ.  10 ನಿಮಿಷಗಳಲ್ಲಿ ವೆಬ್ ಸೈಟ್  ನಿರ್ಮಾಣ ಮಾಡಲು ಸಹಾಯವಾಗುವಂತ 'ಮೈ ಬ್ಯುಸಿನೆಸ್ ವೆಬೆ ಸೈಟ್ ' ಆರಂಭಿಸಲಿದೆ ಎಂದು ಹೇಳಿದ್ದಾರೆ.

ಮೊದಲಿಗೆ ಭಾರತದಲ್ಲಿ ಇದನ್ನು ಆರಂಭಿಸಲಾಗುವುದು, ನಂತರ ಇತರ ದೇಶಗಳಲ್ಲಿ ಪರಿಚಯಿಸಲಾಗುವುದು ಎಂದು, ಯಾವುದೇ ಸಣ್ಣ ಕಂಪನಿಗಳು ಇದಕ್ಕೆ ಕೈ ಜೋಡಿಸಬಹುದು ಎಂದು ಸುಂದರ್ ಪಿಚ್ಟೈ ತಿಳಿಸಿದ್ದಾರೆ. ಕೇವಲ ಶೇ. 6 ರಷ್ಟು ಸಣ್ಣ ಉದ್ದಿಮೆಗಳು ಭಾರತದಲ್ಲಿ ವೆಬ್ ಸೈಟ್ ಗಳನ್ನುಹೊಂದಿವೆ ಎಂದು ಅವರು ಹೇಳಿದ್ದಾರೆ.

SCROLL FOR NEXT