ನವದೆಹಲಿ: ಕೇಂದ್ರ ಸರ್ಕಾರ ಜ.6 ರಂದು ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಬಹಿರಂಗಪಡಿಸಿದ್ದು, ಮಾರ್ಚ್ ನಲ್ಲಿ ಅಂತ್ಯಗೊಳ್ಳಲಿರುವ 2016-17 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.7.6 ರಿಂದ ಶೇ.7.1 ಕ್ಕೆ ಕುಸಿಯಲಿದೆ ಎಂದು ಹೇಳಿದೆ.
ಕೇಂದ್ರದ ಅಂಕಿ-ಅಂಶ ಇಲಾಖೆಯ ಅಧಿಕಾರಿ ಅನಂತ್, 2016-17 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.7.1 ಕ್ಕೆ ಕುಸಿಯಲಿದೆ ಎಂದು ಮಾಹಿತಿ ನೀಡಿದ್ದಾರೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ಅಮಾನ್ಯ ಮಾಅಡಿ ನಿರ್ಧಾರ ಪ್ರಕಟಿಸಿದ ಪರಿಣಾಮವಾಗಿ 2016-17 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.3-6.4 ರಷ್ಟಿರಲಿದೆ ಎಂದು ಹಲವು ಖಾಸಗಿ ಆರ್ಥಿಕ ತಜ್ಞರು ಅಂದಾಜಿಸಿ, ಆರ್ಥಿಕ ಬೆಳವಣಿಗೆ ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷವಾದರೂ ಕಾಲಾವಕಾಶ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದೇ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆ ದರವಾಗಿದ್ದು, 2014-15 ರಲ್ಲಿ ಶೇ. 7.2 ರಷ್ಟು ಹಾಗೂ 2015-16 ನೇ ಸಾಲಿನಲ್ಲಿ 7.6 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಇದೇ ಮೊದಲ ಬಾರಿಗೆ ಶೇ.7.1 ಕ್ಕೆ ಕುಸಿದಿದೆ. ನೋಟು ನಿಷೇಧಕ್ಕಿಂತ ಮುನ್ನ ಬಿಡುಗಡೆಯಾಗಿದ್ದ ಜಿಡಿಪಿ ಬೆಳವಣಿಗೆ ಮುನ್ನೋಟಕ್ಕಿಂತ ಕೇಂದ್ರ ಸರ್ಕಾರ ಬಹಿರಂಗಪಡಿಸಿರುವ ಜಿಡಿಪಿ ಬೆಳವಣಿಗೆ ದರ ಕುಸಿದಿದೆ.
ಅಕ್ಟೋಬರ್ ನಲ್ಲಿ ಅಂದಾಜು ಮಂಡಿಸಿದ್ದ ಐಎಂಎಫ್ ಭಾರತದ ಆರ್ಥಿಕತೆ 2016-17 ನೇ ಸಾಲಿನಲ್ಲಿ ಶೇ.ಜಿಡಿಪಿ 7.6 ರಷ್ಟಿರಲಿದೆ ಎಂದು ಹೇಳಿತ್ತು. ಆರ್ಥಿಕ ಸಮೀಕ್ಷೆಯ ಪ್ರಕಾರ ಜಿಡಿಪಿ ಬೆಳವಣಿಗೆ ದರ ಶೇ.7 ರಿಂದ ಶೇ.7.5 ರಷ್ಟಿರಲಿದೆ ಎಂದು ಅಂದಾಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics