ವಾಣಿಜ್ಯ

ಎಟಿಎಂ ವಿತ್ ಡ್ರಾ ಮಿತಿ 4,500ರಿಂದ 10,000 ರು.ಗೆ ಏರಿಕೆ

Lingaraj Badiger
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಉಂಟಾಗಿದ್ದ ನಗದು ಬಿಕ್ಕಟ್ಟನ್ನು ಅವಲೋಕಿಸಿದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಎಟಿಎಂಗಳ ಮೂಲಕ ದಿನವೊಂದಕ್ಕೆ ವಿತ್‍ಡ್ರಾ ಮಾಡುವ ಹಣದ ಮಿತಿಯನ್ನು 4,500 ರುಪಾಯಿಯಿಂದ 10,000 ರು.ಗೆ ಸೋಮವಾರ ಏರಿಕೆ ಮಾಡಿದೆ.
ಇದೇ ವೇಳೆ ಚಾಲ್ತಿ ಖಾತೆಯಿಂದ ವಿತ್ ಡ್ರಾ ಮಾಡುವ ಹಣದ ಮಿತಿಯನ್ನು ಆರ್ ಬಿಐ ಏರಿಕೆ ಮಾಡಿದ್ದು, ವಾರವೊಂದಕ್ಕೆ ವಿತ್ ಡ್ರಾ ಮಿತಿಯನ್ನು 50,000 ರು.ಯಿಂದ 1,00,000 ವರೆಗೆ ಏರಿಕೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಇಂದು ಸುತ್ತೋಲೆ ಹೊರಡಿಸಿದೆ.
ಈ ಮಧ್ಯೆ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರುಪಾಯಿ ಮಾತ್ರ ಡ್ರಾ ಮಾಡಬಹುದಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಸ್ಪಷ್ಟುಪಡಿಸಿದೆ.
SCROLL FOR NEXT