ಜಿಯೋ 
ವಾಣಿಜ್ಯ

ಡಿಸೆಂಬರ್ ಅಂತ್ಯಕ್ಕೆ 72.4 ಮಿಲಿಯನ್ ದಾಟಿದ ಜಿಯೋ ಗ್ರಾಹಕರ ಸಂಖ್ಯೆ

ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಷಿಸಿದ್ದ ಜಿಯೋಗೆ ಡಿಸೆಂಬರ್ 31 ಅಂತ್ಯಕ್ಕೆ 72.4 ಮಿಲಿಯನ್...

ಮುಂಬೈ: ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಷಿಸಿದ್ದ ಜಿಯೋಗೆ ಡಿಸೆಂಬರ್ 31 ಅಂತ್ಯಕ್ಕೆ 72.4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. 
ಡಿಸೆಂಬರ್ 31ರವರೆಗೂ 72.4 ಮಿಲಿಯನ್ ಗ್ರಾಹಕರು ಜಿಯೋ ಸೇವೆಯನ್ನು ಬಳಸುತ್ತಿದ್ದು ದಿನಂ ಪ್ರತಿ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಶುಮಾನ್ ಠಾಕೂರ್ ಹೇಳಿದ್ದಾರೆ. 
ನ್ಯೂ ಇಯರ್ ವೆಲ್ಕಮ್ ಆಫರ್ ಮಾರ್ಚ್ 4ರವರೆಗೆ ಮಾತ್ರ ಲಭ್ಯವಿರುತ್ತದೆ ತದ ನಂತರ ಯಾವುದೇ ಉಚಿತ ಸೇವೆಗಳನ್ನು ನೀಡುವ ಕುರಿತು ನಿರ್ಧರಿಸಿಲ್ಲ ಎಂದರು. ಇನ್ನು ಜಿಯೋ ಬಿಡುಗಡೆಯಾದ ಸಂದರ್ಭದಲ್ಲಿ ದಿನಂ ಪ್ರತಿ 5 ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಸಿಮ್ ಖರೀದಿಸುತ್ತಿದ್ದರು ಎಂದು ಹೇಳಿದರು. 
ಜಿಯೋ ಬಿಡುಗಡೆ ವೇಳೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ 100 ಮಿಲಿಯನ್ ಗ್ರಾಹಕರನ್ನು ಹೊಂದುವ ಭರವಸೆ ವ್ಯಕ್ತಪಡಿಸಿದ್ದರು. ಅದೇ ರೀತಿ ಹೆಚ್ಚು ಹೆಚ್ಚು ಮಟ್ಟದಲ್ಲಿ ಜನರು ಜಿಯೋ ಸಿಮ್ ಗಳನ್ನು ಖರೀದಿಸುತ್ತಿದ್ದಾರೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!