ನವದೆಹಲಿ: ಕೇಂದ್ರ ಸಾಮಾನ್ಯ ಬಜೆಟ್ ಮಂಡನೆಗೆ ಇನ್ನು ಒಂದೇ ದಿನ ಬಾಕಿ ಇರುವಾಗ ವೃತ್ತಿಪರರು ಯಾವುದಕ್ಕೆ ಎಷ್ಟು ತೆರಿಗೆ ಹಾಕಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಶೇಕಡಾ 85ರಷ್ಟು ಮಂದಿ ವೈಯಕ್ತಿಕ ತೆರಿಗೆಗಳಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸುತ್ತಿದ್ದಾರೆ.
ಸಮೀಕ್ಷೆ ಪ್ರಕಾರ, 750 ಮಂದಿ ಹಿರಿಯ ವೃತ್ತಿಪರರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ನೋಟುಗಳ ಅಮಾನ್ಯತೆ ನಂತರ ತೆರಿಗೆ ದರ ಕಡಿತ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ.
ಬಹುಪಾಲು ಮಂದಿ ವೈಯಕ್ತಿಕ ತೆರಿಗೆ ಇಳಿಕೆಯಾಗುವುದನ್ನು ನಿಷೇಧಿಸುತ್ತಿದ್ದಾರೆ. ಕಳೆದ ಬಜೆಟ್ ನಲ್ಲಿ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಆಗದ್ದರಿಂದ ಈ ಬಾರಿಯ ಬಜೆಟ್ ನಲ್ಲಿ ಎಲ್ಲರ ದೃಷ್ಟಿ ನೆಟ್ಟಿದೆ. ಶೇಕಡಾ 94.13 ಮಂದಿ ಹೇಳುವ ಪ್ರಕಾರ ತೆರಿಗೆ ಪಾವತಿದಾರರಿಗೆ ಕೆಲವು ನಿರಾಳತೆ ಸಿಗಲಿದೆ ಎಂದು ವೃತ್ತಿಪರ ಸೇವಾ ಕಂಪೆನಿ ಕೆಪಿಎಂಜಿ ತಿಳಿಸಿದೆ.