2016-17 ನೇ ಸಾಲಿನಲ್ಲಿ ಮಾಂಸ ರಫ್ತು 13.53 ಲಕ್ಷ ಟನ್ ಗಳಿಗೆ ಏರಿಕೆ: ನಿರ್ಮಲಾ ಸೀತಾರಾಮನ್
ಭಾರತದಿಂದ ರಫ್ತಾಗುವ ಮಾಂಸದ ಪ್ರಮಾಣ 2016-17 ನೇ ಸಾಲಿನಲ್ಲಿ 13.53 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ: ಭಾರತದಿಂದ ರಫ್ತಾಗುವ ಮಾಂಸದ ಪ್ರಮಾಣ 2016-17 ನೇ ಸಾಲಿನಲ್ಲಿ 13.53 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಫ್ತು ಪ್ರಮಾಣ ಹೆಚ್ಚಿದೆಯಾದರೂ ಅದರಿಂದ ಬರುವ ಲಾಭ ಕುಗ್ಗಿದ್ದು 2015-16 ರಲ್ಲಿ 27,528 ಕೋಟಿಯಷ್ಟಿದ್ದ ಲಾಭ ಈ ವರ್ಷ 27,184 ಕೋಟಿಗೆ ಇಳಿಕೆಯಾಗಿದೆ. ಸಂಸತ್ ನ ರಾಜ್ಯಸಭೆಯ ಕಲಾಪದಲ್ಲಿ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಂಕಿ-ಅಂಶಗಳ ಪ್ರಕಾರ ಎಮ್ಮೆ ಮಾಂಸದ ರಫ್ತು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
2016-17 ರ ಏಪ್ರಿಲ್-ಮೇ ತಿಂಗಳಲ್ಲಿ ಎಮ್ಮೆ ಮಾಂಸ ರಫ್ತು 554 ಮಿಲಿಯನ್ ಡಾಲರ್ ನಷ್ಟಿತ್ತು. ಈಗ 530 ಮಿಲಿಯನ್ ಡಾಲರ್ ಗೆ ಕುಸಿದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇನ್ನು 2015-16 ರಿಂದ ಲೆದರ್ ಉತ್ಪನ್ನಗಳ ರಫ್ತು ಸಹ ಕುಸಿದಿದ್ದು, ಇದಕ್ಕೆ ಯುರೋಪಿಯನ್ ಮಾರುಕಟ್ಟೆ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಸ್ಥಿರತೆಯೇ ಕಾರಣ ಎಂದು ಹೇಳಲಾಗುತ್ತಿದೆ ಎಂದು ಸೀತಾರಾಮನ್ ಸದನಕ್ಕೆ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.