ವಾಣಿಜ್ಯ

ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?

Srinivas Rao BV
ನವದೆಹಲಿ: ಜೂ.7 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸಲಿದ್ದು, ವಿತ್ತೀಯ ನೀತಿಯನ್ನು ಯಥಾಸ್ಥಿತಿ ಮುಂದುವರೆಸಲಿದೆ ತಜ್ಞರು ಹೇಳಿದ್ದಾರೆ. 
ಜಿಡಿಪಿ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದರ ಇಳಿಕೆ ಮಾಡಲು ಕೈಗಾರಿಕೆಗಳು ಹಾಗೂ ಸರ್ಕಾರ ಒತ್ತಾಯ ಮಾಡುತ್ತಿದೆ. ಆದರೆ ಹಣದುಬ್ಬರ ಹಾಗೂ ಮಾರುಕಟ್ಟೆಯಲ್ಲಿನ ಲಿಕ್ವಿಡಿಟಿ ಅನುಪಾತವನ್ನು ಗಮನದಲ್ಲಿಟ್ಟುಕೊಂಡರೆ ಬಡ್ಡಿ ದರ ಇಳಿಕೆ ಮಾಡುವುದು ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಜೂ.6 ಹಾಗೂ 7 ರಂದು ಸಭೆ ಸೇರಲಿದ್ದು, ಹಣಕಾಸು ನೀತಿ ಪ್ರಕಟ ಮಾಡಲಿದೆ, ಹಣಕಾಸು ನೀತಿ ಪ್ರಕಟ ಮಾಡುವುದಕ್ಕೂ ಮುನ್ನ ಸಿಪಿಐ ಡಾಟಾ ಪರಿಶೀಲನೆ ನಡೆಸಿ ಆ ನಂತರ ಆರ್ ಬಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆದರೆ ಬಡ್ಡಿ ದರ ಕಡಿಮೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ವಿನೋದ್ ಹೇಳಿದ್ದಾರೆ.
SCROLL FOR NEXT