ವಾಣಿಜ್ಯ

ಭಾರತದ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಮೂರು ಪಟ್ಟು ಹೆಚ್ಚಳ: ಚೀನಾ ಕಂಪೆನಿಗಳಿಗೆ ವರದಾನ

Sumana Upadhyaya
ನವದೆಹಲಿ: ಚೀನಾ ದೇಶದ ತೀವ್ರ ಪೈಪೋಟಿಯಿಂದಾಗಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ಕೂಡ ಸ್ಥಳೀಯ ಉತ್ಪಾದನೆಯ ಬದಲಿಗೆ ಅಗ್ಗದ ವಿದ್ಯುತ್ ಗೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಭಾರತದ ದೊಡ್ಡ ದೊಡ್ಡ ಸೋಲಾರ್ ಉಪಕರಣ ತಯಾರಿಕಾ ಸಂಸ್ಥೆಗಳು ಆರ್ಥಿಕ ಕುಸಿತವನ್ನು ಕಾಣುತ್ತಿದೆ.
ಹವಾಮಾನ ಬದಲಾವಣೆ ಕುರಿತಂತೆ ಮಾಡಲಾದ ಪ್ಯಾರಿಸ್ ಒಪ್ಪಂದಗದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಬಂದಿದ್ದರೂ ಕೂಡ ಭಾರತ ನವೀಕರಿಸಬಹುದಾದ ಇಂಧನ ಕಾರ್ಯಕ್ರಮಕ್ಕೆ ತೀವ್ರ ಒತ್ತು ನೀಡುತ್ತಿದೆ. ಭಾರತದ ಈ ಆದ್ಯತೆ ಚೀನಾ ದೇಶದ ಸೋಲಾರ್ ಉತ್ಪನ್ನ ತಯಾರಕರಿಗೆ ಶತಕೋಟಿ ಡಾಲರ್ ಗಳ ವ್ಯವಹಾರ ಮಾಡುವ ಮಾರುಕಟ್ಟೆಯನ್ನು ಒದಗಿಸಿದೆ. ಆಸಕ್ತಿಕರ ವಿಷಯವೆಂದರೆ ಚೀನಾದಲ್ಲಿ ತಯಾರಾಗುವ ಸೋಲಾರ್ ಉಪಕರಣಗಳಿಗೆ ಅಲ್ಲಿ ಬೇಡಿಕೆಯಿಲ್ಲ. ಅಲ್ಲಿ ತುಂಬಿತುಳುಕುತ್ತಿವೆ ಮತ್ತು ಯುರೋಪ್ ನಲ್ಲಿ ಭಾರೀ ತೆರಿಗೆಯನ್ನು ಹೊಂದಿದೆ.
ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸೋಲಾರ್ ಉತ್ಪಾದನೆಯ ಸಾಮರ್ಥ್ಯ ಮೂರು ಪಟ್ಟು ಹೆಚ್ಚಾಗಿದೆ. 12 ಗಿಗಾವಾಟ್ ನಷ್ಟಾಗಿದೆ. 2022ರ ವೇಳೆಗೆ ನವೀಕರಿಸಬಹುದಾದ ಇಂಧನದಿಂದ ಶಕ್ತಿಯನ್ನು 175 ಗಿಗಾವಾಟ್ ಗೆ ಹೆಚ್ಚಿಸಲು ಮೋದಿ ಸರ್ಕಾರ ಗುರಿಯನ್ನಿಟ್ಟುಕೊಂಡಿದೆ.
ಭಾರತ ಸರ್ಕಾರದ ಈ ಗುರಿ ಚೀನಾಕ್ಕೆ ವರದಾನವಾಗಿದೆ. ಭಾರತದ ಶೇಕಡಾ 85ರಷ್ಟು ಸೌರ ಮಾಡ್ಯೂಲ್ ಬೇಡಿಕೆಯಿಂದ ಸುಮಾರು 2 ಶತಕೋಟಿ ಡಾಲರ್ ನಷ್ಟು ಚೀನಾ ಮಾರುಕಟ್ಟೆ ಸಂಪಾದಿಸುತ್ತಿದೆ ಎಂದು ಕೈಗಾರಿಕಾ ಅಂಕಿಅಂಶಗಳು ತಿಳಿಸಿವೆ. ಮುಂದಿನ ಕೆಲ ವರ್ಷಗಳಲ್ಲಿ ಸೌರ ಉಪಕರಣ ಮಾರುಕಟ್ಟೆಯಲ್ಲಿ 10 ಶತಕೋಟಿ ಡಾಲರ್ ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಆದರೆ ಭಾರತದ ಕಂಪೆನಿಗಳಾದ ಜುಪಿಟರ್ ಸೋಲಾರ್, ಇಂಡೊಸೋಲಾರ್ ಲಿಮಿಟೆಡ್ ಮತ್ತು ಮೊಸೆರ್ ಬಯೆರ್ ಇಂಡಿಯಾ ಲಿಮಿಟೆಡ್ ಗುತ್ತಿಗೆ ಪಡೆಯಲು ಹರಸಾಹಸ ಪಡುತ್ತಿವೆ.
ಹೀಗಾಗಿ ಜ್ಯುಪಿಟರ್ ಕಂಪೆನಿ ತನ್ನ ಕೊನೆಯ ಆರ್ಡರ್ ನ್ನು ಈ ತಿಂಗಳಾಂತ್ಯಕ್ಕೆ ಗ್ರಾಹಕರಿಗೆ ನೀಡಿದ ನಂತರ ಉತ್ಪಾದನೆಯನ್ನು ಮುಚ್ಚುವುದಾಗಿ ಹೇಳಿದೆ. ಇಂಡೊಸೋಲಾರ್ ಲೆಕ್ಕಪರಿಶೋಧಕರು ಕೂಡ ಕಂಪೆನಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ತಯಾರಾಗುವ ಉಪಕರಣಗಳು ಭಾರತದ ಉಪಕರಣಕ್ಕಿಂತ ಶೇಕಡಾ 10ರಿಂದ 20ರಷ್ಟು ಕಡಿಮೆಗೆ ದೊರಕುತ್ತದೆ.ಚೀನಾ ಕಂಪೆನಿಗಳು ಸೋಲಾರ್ ಸೆಲ್ ಗಳನ್ನು ಭಾರತದಲ್ಲಿ 19-20 ಯು.ಎಸ್ ಸೆಂಟ್ಸ್ ಗಳಿಗೆ ಅಂದರೆ ಉತ್ಪಾದನೆ ವೆಚ್ಚಕ್ಕಿಂತ ಶೇಕಡಾ 35ರಷ್ಟು ಕಡಿಮೆಗೆ ಮಾರಾಟ ಮಾಡುತ್ತವೆ ಎನ್ನುತ್ತಾರೆ.
ಭಾರತದಲ್ಲಿ 110ಕ್ಕಿಂತಲೂ ಅಧಿಕ ಸೌರ ಕೋಶ ಮತ್ತು ಮಾಡ್ಯೂಲ್ ತಯಾರಕರು ಸರ್ಕಾರದಿಂದ ದಾಖಲಾತಿ ಹೊಂದಿದವರು ಇದ್ದಾರೆ. ಅವರಲ್ಲಿ ಕನ್ಸಲ್ಟೆನ್ಸಿ ಬ್ರಿಡ್ಜ್ ಉಳಿಯುವ ಸಾಧ್ಯತೆಯಿದೆ. 
ದೇಶೀಯ ಸೌರ ಉತ್ಪಾದನಾ ವಲಯವನ್ನು ಉತ್ತೇಜಿಸಲು ಸರ್ಕಾರ ಅನೇಕ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೊಸ ಮತ್ತು ನವೀಕರಣ ಇಂಧನ ಸಚಿವಾಲಯದ ಹಿರಿಯ ಅಧಿಕಾರಿ ಸಂತೋಷ್ ವೈದ್ಯ ಹೇಳುತ್ತಾರೆ.
ಪ್ರಮಾಣದ ಕೊರತೆ, ಕಚ್ಚಾ ವಸ್ತುಗಳ ಪೂರೈಕೆ ಇಲ್ಲದಿರುವುದು,  ಮತ್ತು ವೇಗವಾಗಿ ಬದಲಾಗುವ ತಂತ್ರಜ್ಞಾನಗಳಿಂದಾಗಿ ಭಾರತೀಯ ಕಂಪೆನಿಗಳು ಚೀನಾ ಉತ್ಪಾದಕರ ಜೊತೆ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಕಂಪೆನಿಗಳ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
SCROLL FOR NEXT