ವಾಣಿಜ್ಯ

ರೆಪೊ ದರ, ರಿವರ್ಸ್ ರೆಪೊ ದರ ಯಥಾ ಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್

Sumana Upadhyaya
ಮುಂಬೈ: 2017-18ನೇ ಸಾಲಿನ ಹಣಕಾಸು ವರ್ಷದ ದ್ವಿತೀಯ ದ್ವೈ ಮಾಸಿಕ ವಿತ್ತೀಯ ನೀತಿ ನೀತಿ ವಿಮರ್ಶೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಶೇಕಡಾ 6.25ರ ಯಥಾಸ್ಥಿತಿ ಕಾಯ್ದುಕೊಂಡಿದೆ. 
ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕುಗಳು ತೆಗೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರಕ್ಕೆ ರೆಪೊ ದರ ಎಂದು ಹೇಳುತ್ತಾರೆ. ರಿಸರ್ವ್ ಬ್ಯಾಂಕ್ ರೆಪೊ ದರದ ಯಥಾಸ್ಥಿತಿ ಕಾಯ್ದುಕೊಳ್ಳುವುದು ಇದು ನಾಲ್ಕನೇ ಸಲ.
ಕಳೆದ ಏಪ್ರಿಲ್ ನಲ್ಲಿ 25  ಆಧಾರ ಪಾಯಿಂಟ್ ಗಳನ್ನು ಹೆಚ್ಚಿಸಿದ್ದ ಆರ್ ಬಿಐ ರಿವರ್ಸ್ ರೆಪೊ ದರವನ್ನು ಕೂಡ ವ್ಯತ್ಯಾಸ ಮಾಡದೆ ಶೇಕಡಾ 6ರಷ್ಟು ಕಾಯ್ದಿರಿಸಿದೆ.
ಗೃಹ ಸಾಲ ದರ: ಗೃಹ ಸಾಲ ಹೊಂದಿರುವವರು ಮುಂದಿನ ದಿನಗಳಲ್ಲಿ ಬಡ್ಡಿದರದಲ್ಲಿ ಇಳಿಕೆಯನ್ನು ನಿರೀಕ್ಷಿಸಬಹುದು. ಕಳೆದ ಏಪ್ರಿಲ್ ತಿಂಗಳಲ್ಲಿ ಆರ್ ಬಿಐ ರೆಪೊ ದರವನ್ನು ಕಡಿತ ಮಾಡದಿದ್ದರೂ ಕೂಡ ಕೆಲವು ಪ್ರಮುಖ ಬ್ಯಾಂಕುಗಳು ಮೇ ತಿಂಗಳಿನಲ್ಲಿ ಗೃಹ ಸಾಲದ ಬಡ್ಡಿ ದರವನ್ನು ಇಳಿಸಿವೆ. ಇದು ಮುಂದಿನ ದಿನಗಳಲ್ಲಿ ಕೂಡ ಕಡಿಮೆಯಾಗುವ ನಿರೀಕ್ಷೆಯಿದೆ.
ಆಕ್ಸಿಸ್ ಬ್ಯಾಂಕ್ 30 ಲಕ್ಷಕ್ಕಿಂತ ಕೆಳಗಿನ ಗೃಹ ಸಾಲದ ಬಡ್ಡಿದರವನ್ನು ಶೇಕಡಾ 8.65ರಿಂದ ಶೇಕಡಾ 8.35ಕ್ಕೆ ಕಡಿತ ಮಾಡಿತ್ತು. ಇದನ್ನು ನಂತರದ ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಹೆಚ್ ಡಿಎಫ್ ಸಿ ಕಳೆದ ವಾರ ಅನುಸರಿಸಿ ಬಡ್ಡಿದರವನ್ನು ಕಡಿಮೆ ಮಾಡಿವೆ. 
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷಕ್ಕಿಂತ ಕೆಳಗೆ ಗೃಹಸಾಲ ಪಡೆದವರಿಗೆ ಶೇಕಡಾ 8.35 ಬಡ್ಡಿದರ ವಿಧಿಸುತ್ತಿದೆ. 30 ಲಕ್ಷಕ್ಕಿಂತ ಅಧಿಕ ಗೃಹ ಸಾಲದವರಿಗೆ ಶೇಕಡಾ 8.50 ಮತ್ತು 75 ಲಕ್ಷಕ್ಕಿಂತ ಅಧಿಕ ಸಾಲ ಹೊಂದಿರುವವರಿಗೆ ಶೇಕಡಾ 8.60 ಬಡ್ಡಿದರ ವಿಧಿಸುತ್ತದೆ. 
ರಿಸರ್ವ್ ಬ್ಯಾಂಕ್ ಇಂದಿನ ವಿತ್ತೀಯ ನೀತಿ ವಿಮರ್ಶೆಯಲ್ಲಿ ಶಾಸನಬದ್ಧ ದ್ರವ್ಯ ಅನುಪಾತವನ್ನು ಕಡಿತಗೊಳಿಸಿದೆ. ಅಂದರೆ ಬ್ಯಾಂಕುಗಳು ಸರ್ಕಾರಿ ಭದ್ರತೆಗಳಲ್ಲಿ ಠೇವಣಿಯಿಡುವ ಶೇಕಡಾವಾರು ಮೊತ್ತವನ್ನು 0.5ರಿಂದ ಶೇಕಡಾ 20.5ರಷ್ಟು ಹೆಚ್ಚಿಸಿದೆ.
SCROLL FOR NEXT