ವಾಣಿಜ್ಯ

ಟ್ರಂಪ್ ನೀತಿಗಳು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು: ವಿಪ್ರೊ

Lingaraj Badiger
ನವದೆಹಲಿ: ಮುಕ್ತ ವ್ಯಾಪಾರದ ಮೇಲೆ ಹೆಚ್ಚು ನಿರ್ಬಂಧಗಳು ಸೇರಿದಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಕೆಲವು ನೀತಿಗಳು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊ ಎಚ್ಚರಿಕೆ ನೀಡಿದೆ.
ಅಮೆರಿಕದಿಂದ ಶೇ. 52ರಷ್ಟು ವಹಿವಾಟು ನಡೆಸುವ ಬೆಂಗಳೂರು ಮೂಲದ ಕಂಪನಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಉಂಟಾಗುತ್ತಿರುವ ಮಹತ್ವದ ಬೆಳವಣಿಗೆಗಳು ಅದರ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಹೇಳಿದೆ.
ಟ್ರಂಪ್ ಮತ್ತು ಅವರ ಆಡಳಿತ ಅಸ್ತಿತ್ವದಲ್ಲಿರುವ ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಪ್ಪಂದ (NAFTA) ಮತ್ತು ಉದ್ದೇಶಿತ ವ್ಯಾಪಾರ ಒಪ್ಪಂದಗಳ ಮೇಲೆ ಪರಿಣಾಮ ಬೀರುವಂತಹ ನೀತಿಗಳಿಗೆ ಟ್ರಂಪ್ ಮತ್ತು ಅವರ ಆಡಳಿತ ಬೆಂಬಲ ನೀಡುತ್ತಿದೆ ಎಂದು ವಿಪ್ರೊ ತನ್ನ ಎಸ್ ಇಸಿ ಫೈಲಿಂಗ್ ನಲ್ಲಿ ತಿಳಿಸಿದೆ.
ವಿಪ್ರೊ ಮಾರ್ಚ್ 31,2017ಕ್ಕೆ ಹಣಕಾಸು ವರ್ಷದ ಅಂತ್ಯಕ್ಕೆ ಮಾರುಕಟ್ಟೆ ನಿಯಂತ್ರಕರಿಗೆ ವಾರ್ಷಿಕ ವರದಿ ಸಲ್ಲಿಸಿದ್ದು, ಟ್ರಂಪ್ ಆಡಳಿತ ಮುಕ್ತ ವ್ಯಾಪಾರದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿದೆ ಮತ್ತು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಗಮನಾರ್ಹವಾದ ಹೆಚ್ಚಳ ಮಾಡುತ್ತಿದೆ ಎಂದು ಹೇಳಿದೆ.
SCROLL FOR NEXT