ರೂ. 500 ಮುಖಬೆಲೆಯ ಹೊಸ ಸರಣಿಯ ನೋಟು ಬಿಡುಗಡೆ; ಹಳೆ ನೋಟು ಚಲಾವಣೆ ಮುಂದುವರಿಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ ಹೊಸ...
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ಇರುವ ಇ ಸರಣಿಯ 500 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಮುಂದುವರಿಯಲಿವೆ.
ಈಗಾಗಲೇ ಇರುವ 500 ರೂಪಾಯಿ ನೋಟುಗಳ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರುತ್ತವೆ. ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಹೊಂದಿರುವ 500 ರೂಪಾಯಿ ಮುಖಬೆಲೆಯ ಬ್ಯಾಂಕು ನೋಟುಗಳ ಮುದ್ರಣ ಕಾಲ ಕಾಲಕ್ಕೆ ಮುಂದುವರಿಯುತ್ತಿದ್ದು ಎರಡೂ ಕಡೆ ಎ ಅಕ್ಷರದ ಸರಣಿಯ ನೋಟುಗಳು ಇಂದು ಬಿಡುಗಡೆಯಾಗಿವೆ. ಅದರಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯಿದೆ, ಹಿಂಬದಿಯಲ್ಲಿ 2017ರಲ್ಲಿ ಮುದ್ರಣ ಎಂದು ಪ್ರಕಟವಾಗಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಎ ಸರಣಿಯ 500 ರೂಪಾಯಿ ನೋಟು ಗಾತ್ರದಲ್ಲಿ 66ಎಂಎಂ x150 ಎಂಎಂ ಇರಲಿದೆ. ನೋಟಿನ ಬಣ್ಣ ಕಲ್ಲಿನ ಬೂದು ಬಣ್ಣದ್ದಾಗಿದ್ದು ಭಾರತದ ಪರಂಪರಾ ತಾಣವಾದ ಕೆಂಪು ಕೋಟೆಯ ಚಿತ್ರ ಮತ್ತು ಹಿಂಬದಿಯಲ್ಲಿ ಭಾರತದ ಧ್ವಜವಿದೆ.
ಇತರ ಲಕ್ಷಣಗಳು: 500ರ ಹೊಸ ನೋಟಿನಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ, ಅಶೋಕ ಪಿಲ್ಲರ್ ಲಾಂಛನ, ಬ್ಲೀಡ್ ಲೈನ್, ಬಲಭಾಗದಲ್ಲಿ 500ರ ಮುಖಬೆಲೆ ಮತ್ತು ಗುರುತು ಚಿಹ್ನೆಯಿದೆ. ದೃಷ್ಟಿ ದೋಷ ಇರುವವರು ಕೂಡ 500ರ ನೋಟನ್ನು ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.