ಕಾಯ್ದಿರಿಸಿದ ಟಿಕೆಟ್ ಗಳ ರದ್ದತಿಯಿಂದ ರೈಲ್ವೆ ಇಲಾಖೆಗೆ 14 ಬಿಲಿಯನ್ ರೂ. ಸಂಗ್ರಹ!
ಕಾಯ್ದಿರಿಸಿದ ಟಿಕೆಟ್ ಗಳ ರದ್ದತಿಯ ಮೂಲಕ ಭಾರತೀಯ ರೈಲ್ವೆ ಇಲಾಖೆ 2016-17 ನೇ ಸಾಲಿನಲ್ಲಿ 14 ಬಿಲಿಯನ್ ರೂಪಾಯಿ ಆದಾಯ ಗಳಿಸಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ನವದೆಹಲಿ: ಕಾಯ್ದಿರಿಸಿದ ಟಿಕೆಟ್ ಗಳ ರದ್ದತಿಯ ಮೂಲಕ ಭಾರತೀಯ ರೈಲ್ವೆ ಇಲಾಖೆ 2016-17 ನೇ ಸಾಲಿನಲ್ಲಿ 14 ಬಿಲಿಯನ್ ರೂಪಾಯಿ ಆದಾಯ ಗಳಿಸಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಆರ್ ಟಿಐ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ರೈಲ್ವೆ ಇಲಾಖೆ, ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಕಾಯ್ದಿರಿಸಿದ ಟಿಕೆಟ್ ಗಳ ರದ್ದತಿಯ ಮೂಲಕ ಸಂಗ್ರಹವಾಗಿರುವ ಆದಾಯ ಶೇ.25.29 ರಷ್ಟು ಹೆಚ್ಚಿದೆ ಎಂದು ಹೇಳಿದೆ. 2015-16 ನೆ ಸಾಲಿನಲ್ಲಿ 11.23 ಬಿಲಿಯನ್, 2014-15 ರಲ್ಲಿ 9.38 ಬಿಲಿಯನ್ ನಷ್ಟು ಹಣ ಸಂಗ್ರಹವಾಗಿತ್ತು ಎಂದು ರೈಲ್ವೆ ಇಲಾಖೆಯ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟನ್ (ಪಿಆರ್ ಎಸ್ ) ಅಡಿಯಲ್ಲಿ ಮಾಹಿತಿ ನೀಡಿದೆ.
ರೈಲ್ವೆ ಇಲಾಖೆ ಕಾಯ್ದಿರಿಸಲಾಗದ ಟಿಕೆಟ್ ಗಳ ರದ್ದತಿಯಿಂದಲೂ ಆದಾಯ ಗಳಿಸುತ್ತಿದ್ದು, ಆರ್ ಟಿಐ ಮಾಹಿತಿಯ ಪ್ರಕಾರ 2016-17 ನೇ ಸಾಲಿನಲ್ಲಿ 17.87 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. 2015-16 ನೇ ಸಾಲಿನಲ್ಲಿ 17.23 ಕೋಟಿ, 2014-15 ನೇ ಸಾಲಿನಲ್ಲಿ 14.72 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಆರ್ ಟಿಐ ಮೂಲಕ ತಿಳಿದುಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.