ವಾಣಿಜ್ಯ

ಎಸ್‌ಬಿಐ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಹಣವಿಲ್ಲದಿದ್ದರೆ ಏಪ್ರಿಲ್ 1ರಿಂದ ದಂಡ!

Vishwanath S
ಮುಂಬೈ: ನೋಟು ನಿಷೇಧದ ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಎಸ್‌ಬಿಐ ಹೊಸದೊಂದು ನೀತಿಯನ್ನು ಪ್ರಕಟಿಸಿದ್ದು, ಎಸ್‌ಬಿಐ ಉಳಿತಾಯ ಖಾತೆ ಹೊಂದಿರುವವರು ನೀವು ಮೆಟ್ರೋ ನಗರದಲ್ಲೇ ವಾಸಿಸುತ್ತಿದ್ದಲ್ಲಿ ಕನಿಷ್ಠ 5 ಸಾವಿರ ರು ಠೇವಣಿ ಇಟ್ಟಿರಬೇಕು ಇಲ್ಲದಿದ್ದರೆ ದಂಡ ಹಾಕಲಿದೆ. 
ಏಪ್ರಿಲ್ 1 ರಿಂದ ನೀತಿ ಜಾರಿಗೆ ಬರಲಿದ್ದು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಮೆಟ್ರೋಪಾಲಿಟನ್ ನಗರಗಳಲ್ಲಿ ಈ ದಂಡದ ಮೊತ್ತ ಹೆಚ್ಚಿರಲಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಮಾಸಿಕ ಸರಾಸರಿ 5 ಸಾವಿರ, ನಗರಗಳಲ್ಲಿ 3 ಸಾವಿರ, ಅರೆನಗರಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1000 ರುಪಾಯಿ ಠೇವಣಿ ಹೊಂದಿರಬೇಕು. 
ಮೆಟ್ರೋ ಸಿಟಿಯ ಗ್ರಾಹಕರು ಖಾತೆಯಲ್ಲಿ 5 ಸಾವಿರ ಮೊತ್ತ ಇರಲೇಬೇಕು. ಅದು ಶೇ.50ರಷ್ಟು ಕಡಿಮೆ ಆಯಿತೆಂದರೆ 50 ರುಪಾಯಿ ತಂಡದ ಜತೆಗೆ ಸೇವಾ ತೆರಿಗೆಯನ್ನು ಕಟ್ಟಬೇಕು. ಇನ್ನು ಶೇ. 70ರಷ್ಟು ಕಡಿಮೆ ಆದರೆ 75 ರುಪಾಯಿ ಮತ್ತು ಸೇವಾ ತೆರಿಗೆ ಕಟ್ಟಬೇಕು. ಒಂದು ವೇಳೆ ಶೇ.75ಕ್ಕಿಂತ ಹೆಚ್ಚು ಹಣ ತೆಗೆದರೆ 100 ರುಪಾಯಿ ಜತೆಗೆ ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 
ಎಸ್‌ಬಿಐ 2012ರಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ದಂಡನೀತಿಯನ್ನು ಕೈಬಿಟ್ಟಿತ್ತು. ಇದೀಗ ಗ್ರಾಹಕರ ಹಣವನ್ನು ಆದಷ್ಟು ಬ್ಯಾಂಕ್ ನಲ್ಲೇ ಇರುವಂತೆ ನೋಡಿಕೊಳ್ಳಲು ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ. ಖಾತೆಯಲ್ಲಿ ಮೊತ್ತ ಇದ್ದಷ್ಟು ಬ್ಯಾಂಕಿಗೆ ಲಾಭವಾಗಲಿದೆ. 
SCROLL FOR NEXT