ವಾಣಿಜ್ಯ

ಗ್ರಾಹಕರಿಗೆ ಸುಗ್ಗಿ: ಬಿಎಸ್ ಎನ್ ಎಲ್ ನಿಂದ ಅನ್ ಲಿಮಿಟೆಡ್ ಪ್ಲಾನ್, ಜಿಯೋ ಪ್ರೈಮ್ ಮೆಂಬರ್ ಷಿಪ್ ಗಡುವು ವಿಸ್ತರಣೆ

Srinivasamurthy VN

ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶದೊಂದಿಗೆ ಟೆಲಿಕಾಂ ಮಾರುಕಟ್ಟೆಯ ಚಿತ್ರಣವೇ ಬದಲಾಗಿ ಹೋಗಿದ್ದು, ಗ್ರಾಹಕರನ್ನು ಸೆಳೆಯಲು ಮೊಬೈಲ್ ಸೇವಾ ಸಂಸ್ಥೆಗಳು ಮೇಲಿಂದ ಮೇಲೆ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ.

ಇದಕ್ಕೆ ನೂತನ ಸೇರ್ಪಡೆ ಎಂದರೆ ಬಿಎಸ್ ಎನ್ ಎಲ್..ಈ ಹಿಂದೆ ಸಂಸ್ಥೆ ಘೋಷಣೆ ಮಾಡಿದಂತೆಯೇ ರಿಲಯನ್ಸ್ ಜಿಯೋ ಪ್ರಬಲ ಪೈಪೋಟಿ ನೀಡುತ್ತಿದ್ದು, ಇದೀಗ ಗ್ರಾಹಕರಿಗೆ ಮತ್ತೊಂದು ಆಫರ್ ನೀಡಿದೆ. ಅದರೆತ ಬಿಎಸ್  ಎನ್ ಎಲ್ ಬ್ರಾಂಡ್ ಬಾಂಡ್ ಗ್ರಾಹಕರು ಪ್ರತೀ ತಿಂಗಳ ಕೇವಲ 249 ರು ನೀಡಿ ನಿತ್ಯ 10 ಜಿಬಿಯಂತೆ ಅನಿಯಮಿತ ಡಾಟಾವನ್ನು ಬಳಕೆ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೇ ಉಚಿತ ಕರೆಗಳು ಕೂಡ ಆಫರ್ ನಲ್ಲಿ ಸೇರಿವೆ.  ಈ ಆಫ‌ರ್‌ ಪ್ರಕಾರ ಗ್ರಾಹಕರು ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯ ಮಿತ ಕರೆ ಮಾಡಬಹುದಾಗಿದೆ.

ಗ್ರಾಹಕರು 249 ರು ಪಾವತಿ ಮಾಡಿ ಈ ಹೊಸ ಆಫರ್ ಗೆ ಬದಲಾದರೆ ನಿತ್ಯ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಅಂತೆಯೇ 2 ಎಂಬಿಪಿಎಸ್ ವೇಗದಲ್ಲಿ ನಿತ್ಯ 10 ಜಿಬಿಯಂತೆ ಅನಿಯಮಿತ  ಡಾಟಾ ಪಡೆಯಬಹುದು ಎಂದು ಬಿಎಸ್ ಎನ್ ಎಲ್ ಘೋಷಣೆ ಮಾಡಿದೆ.

ಜಿಯೋ ಪ್ರೈಮ್ ಮೆಂಬರ್ ಷಿಪ್ ಗಡುವು ವಿಸ್ತರಣೆ
ಇನ್ನು ಟೆಲಿಕಾಂ ಮಾರುಕಟ್ಟೆಯ ಸಂಚನಕ್ಕೆ ಕಾರಣವಾಗಿರುವ ರಿಲಯನ್ಸ್ ಜಿಯೋ ಕೂಡ ತನ್ನ ಗ್ರಾಹಕ ಸ್ನೇಹಿ ಜಿಯೋ ಪ್ರೈಮ್ ಮೆಂಬರ್ ಷಿಪ್ ನ ಗಡುವನ್ನು ವಿಸ್ತರಣೆ ಮಾಡಿದ್ದು, ಏಪ್ರಿಲ್ 15ರವರೆಗೂ ಗ್ರಾಹಕರು ಈ ಆಫರ್  ಪಡೆದುಕೊಳ್ಳಬಹುದಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಸುಮಾರು 72 ಮಿಲಿಯನ್ ಗ್ರಾಹಕರು ಜಿಯೋ ಪ್ರೈಮ್ ಮೆಂಬರ್ ಷಿಪ್ ಗೆ ಸಹಿ ಹಾಕಿದ್ದು, 303ರು.ಗಳ ಪಾವತಿ ಮಾಡಿ ಸೇವೆ ಪಡೆಯುತ್ತಿದ್ದಾರೆ.

SCROLL FOR NEXT